ದೇವರ ಹರಿಕೆಗೆ ಕೊಂಡೊಯ್ಯುತ್ತಿದ್ದ ಕೋಳಿಗೆ ಟಿಕೆಟ್ ಕೊಟ್ಟ ಕೆಎಸ್ಆರ್ ಟಿಸಿ ಕಂಡಕ್ಟರ್…!

ಪುತ್ತೂರು : ಕೆ.ಎಸ್ಆರ್ ಟಿಸಿ ಬಸ್ಸಿನಲ್ಲಿ ದೇವರ ಹರಿಕೆಗೆ ಕೊಂಡೊಯ್ಯುತ್ತಿದ್ದ ಕೋಳಿಗೆ ಕಂಡಕ್ಟರ್ ಟಿಕೆಟ್ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೈವಾರಾಧನಾ ಕ್ಷೇತ್ರಕ್ಕೆ ಅಗೇಲು ಸೇವೆ ಸಲ್ಲಿಸಲೆಂದು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಚೀಲದಲ್ಲಿ ಕೋಳಿ ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದ ಕಂಡಕ್ಟರ್‌ ಬರೋಬ್ಬರಿ 50 ರೂಪಾಯಿ ಪಡೆದುಕೊಂಡು ಟಿಕೆಟ್‌ ನೀಡಿದ್ದಾರೆ. ಈ ವಿಷಯವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರ ಅವರು ಸಾರಿಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

READ ALSO

ಕೆಎಸ್ಆರ್ ಟಿಸಿ ಪುತ್ತೂರು ಘಟಕದ ಸಭೆಯಲ್ಲಿ ಪಾಲ್ಗೊಂಡಿದ್ದ, ಶಾಸಕ ಮಠಂದೂರು ಅವರು ಸಾರಿಗೆ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆಯೇ ಕೆಎಸ್ ಆರ್ ಟಿಸಿ ವಿಭಾಗೀಯ ಸಂಚಲನಾ ಅಧಿಕಾರಿ ಮುರುಳೀಧರ್ ಅವರು ಸರಕಾರದ ಸುತ್ತೋಲೆಯ ಪ್ರಕಾರ, ಬಸ್ಸಿನಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿ ಪಕ್ಷಿ, ಪ್ರಾಣಿ ಯಾವುದೂ ಒಯ್ಯುವಂತಿಲ್ಲ. ಕೋಳಿಯೇ ಆದರೂ ಸರಿ, ಒಂದು ಕೋಳಿಗೆ ಒಬ್ಬ ಪ್ರಯಾಣಿಕನಷ್ಟೇ ದರವನ್ನು ನಿಗದಿಪಡಿಸಬೇಕೆಂಬ ನಿಯಮವಿದೆ.ಸರಕಾರದ ಆದೇಶವಿರುವ ಕಾರಣ ನಾವೇನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಒಟ್ಟು ಮೂರು ಕೋಳಿಗಳು ಇರುವ ಕಾರಣದಿಂದಾಗಿ 50 ರೂಪಾಯಿ ಪಡೆದಿರಬಹುದು. ಈ ಕುರಿತು ಶಶಾಸಕರು ಪತ್ರವನ್ನು ನೀಡಿದ್ರೆ ಅದನ್ನು ಸರಕಾರಕ್ಕೆ ಕಳುಹಿಸಿಕೊಡುವ ಕಾರ್ಯವನ್ನು ಮಾಡಬಹುದು. ಅದನ್ನು ಹೊರತು ಪಡಿಸಿ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.