
ಬೆಳ್ತಂಗಡಿ: ಉಜಿರೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ನ ಹಿಂಬದಿಯ ಟಯರ್ ಕಳಚಿಬಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆಯಷ್ಟೇ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಉಜಿರೆಯ ಮುಖ್ಯ ರಸ್ತೆಯಲ್ಲಿ ಸರಕಾರಿ ಬಸ್ ಅವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಗುಣಮಟ್ಟ ಸಮರ್ಪಕವಾಗಿಲ್ಲದ ಬಸ್ ಗಳನ್ನು ಸಂಚಾರಕ್ಕೆ ನಿಯೋಜಿಸದಂತೆ ಹಾಗೂ ಸುಸ್ಥಿತಿಯಲ್ಲಿ ಇರುವ ಬಸ್ ಗಳನ್ನು ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಪ್ರತಿಭಟನೆಯಲ್ಲಿ ಆಗ್ರಹಿಸಿದ್ದರು ಆದರೆ ಸಂಬಂಧ ಪಟ್ಟವರು ಈ ಬಗ್ಗೆ ಗಮನಹರಿಸದೇ ಇಂದು ಮತ್ತೊಂದು ಅವಘಡಕ್ಕೆ ಸಾಕ್ಷಿಯಾದಂತೆ ಕಾಣುತ್ತಿದೆ.
ಬಸ್ಸಿನಲ್ಲಿ ಕಡಿಮೆ ಜನ ಇದ್ದ ಕಾರಣ ಯಾವುದೇ ಗಂಭೀರ ಅಪಾಯವಾಗಿಲ್ಲ ಇದೇ ಬಸ್ ಶಾಲೆ ಕಾಲೇಜು ಬಿಡುವ ಸಮಯದಲ್ಲಿ ಬರುತ್ತಿದ್ದಲ್ಲಿ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುವ ಅನಿವಾರ್ಯತೆ ಇತ್ತು ಹೀಗಾಗುತಿದ್ದಲ್ಲಿ ಗಂಭೀರ ಪ್ರಮಾಣದ ಅವಘಡಗಳು ಸಂಭವಿಸುವ ಸಾಧ್ಯತೆ ಇತ್ತು ಕೆಲವು ಮೂಲಗಳ ಪ್ರಕಾರ ಈ ಬಸ್ ಉಜಿರೆಯಿಂದ ಬೆಳ್ತಂಗಡಿಗೆ ಹೋಗಿ ನಂತರ ಬಂಗಾಡಿ ಕೊಲ್ಲಿಗೆ ಸಂಚರಿಸುವ ಬಸ್ ಎಂದು ಹೇಳುತ್ತಿದ್ದು ಬೆಳ್ತಂಗಡಿ ತಲುಪುವ ಮೊದಲೇ ಉಜಿರೆಯ ಟಿಬಿ ಕ್ರಾಸ್ ಬಳಿ ಚಕ್ರಕಳಚಿ ಅವಘಡ ಸಂಭವಿಸಿದ್ದು ಎನ್ನಲಾಗಿದೆ.