ಪಿಲಿಕುಳದಲ್ಲಿ ಆಕರ್ಷಣೆಗೆ ಪಾತ್ರವಾಗಿದ್ದ ಲಂಗೂರು ಸಾವು- ಪಡುಬಿದ್ರೆ ಬಾರ್ ನಲ್ಲಿ ಕುಡಿದು ಟೈಟಾಗಿ ಸಿಕ್ಕಿದ್ದ ರಾಜು!

ಮಂಗಳೂರು: ಪಡುಬಿದ್ರೆ ಬಾರ್ ನಲ್ಲಿ ಕುಡಿದು ಟೈಟಾಗುತ್ತಿದ್ದ ಲಂಗೂರ್  ರಾಜು  ಪಿಲಿಕುಳದಲ್ಲಿ ಸಾವನ್ನಪ್ಪಿದೆ. 2005 ರಲ್ಲಿ ರಾಜುವನ್ನು ಪಡುಬಿದ್ರೆ ಬಾರ್ ನಿಂದ ರಕ್ಷಿಸಿ ತರಲಾಗಿತ್ತು.

ರಾಜು ಎಂಬ ಹೆಸರಿನ ಈ ಲಂಗೂರ್ 2005 ರಲ್ಲಿ ಪಡುಬಿದ್ರೆಯ ಬಾರ್ ವೊಂದರಲ್ಲಿ ಸಿಕ್ಕಿತ್ತು. ಈ ಲಂಗೂರ್ ಬಾರ್ ನ ಮಾಲಕ ಮತ್ತು ಗ್ರಾಹಕರಿಗೆ ಪ್ರೀತಿಪಾತ್ರವಾಗಿದ್ದ ಪ್ರಾಣಿಯಾಗಿತ್ತು. ಆದರೆ ಇದಕ್ಕೆ ಮದ್ಯದ ರುಚಿ ಸಿಕ್ಕಿ ವಿಪರೀತ ಮದ್ಯಪಾನ ಮಾಡುತ್ತಿತ್ತು. ಮದ್ಯದ ಚಟದಿಂದ ತನ್ನ ಆರೋಗ್ಯವನ್ನು ಕೆಡಿಸಿಕೊಂಡಿತ್ತು.

READ ALSO

2005 ರಲ್ಲಿ ಪಡುಬಿದ್ರೆಯ ಬಾರ್  ನಿಂದ  ಇದನ್ನು ರಕ್ಷಿಸಿ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಕರೆತರಲಾಯಿತು. ಸುಮಾರು ಒಂದು ತಿಂಗಳ ಕಾಲ ಅದರ ಮದ್ಯದ ಚಟವನ್ನು ಬಿಡಿಸಿ ಅದಕ್ಕೆ ವಿವಿಧ ಬಗೆಯ ಹಣ್ಣುಗಳನ್ನು ಸೇವನೆ ಮಾಡಿಸಲಾಯಿತು.

 ಲಂಗೂರ್ ತನ್ನ ಆಕರ್ಷಣೆಯಿಂದ ಪ್ರವಾಸಿಗರ ಪ್ರೀತಿಗೆ ಪಾತ್ರವಾಗಿತ್ತು. ಸಾಮಾನ್ಯವಾಗಿ 18 ರಿಂದ 20 ವರ್ಷ ಲಂಗೂರ್ ಬದುಕುತ್ತದೆ. ಈ ರಕ್ಷಿಸಲಪಟ್ಟ ಲಂಗೂರ್ 21 ವರ್ಷ ಬದುಕಿದೆ.