
ಬೆಳ್ತಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇಲ್ಲಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಬಡಗಕಾರಂದೂರು ಗ್ರಾಮದ ಡಾ| ಶಶಿಧರ ಡೋಂಗ್ರೆ ಸೇನೆರೆಬೈಲು ಅವರು ಆಯ್ಕೆಯಾಗಿದ್ದಾರೆ.
ಆ. 22 ರಂದು ದೇವಸ್ಥಾನದ ವಠಾರದಲ್ಲಿ ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕರ ಅವರ ಉಪಸ್ಥಿತಿಯಲ್ಲಿ ಸದಸ್ಯರ ಸಭೆ ನಡೆದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಸದಸ್ಯರಾಗಿ ಪ್ರಧಾನ ಅರ್ಚಕ ಸೋಮನಾಥ ಮಯ್ಯ ಅಳದಂಗಡಿ, ಸದಾನಂದ ತೋಟದಪಲ್ಕೆ, ದೀಪಕ್ ಎಚ್.ಡಿ. ಬೊಳ್ಳಾಜೆ, ಜಿನ್ನಪ್ಪ ಶೆಟ್ಟಿ ಕೆದ್ದು, ಸತೀಶ್ ಪೂಜಾರಿ ನಡಾಯಿ, ಸತೀಶ್ ದೇವಾಡಿಗ ಸಾರಬೈಲು, ಸುಮಲತಾ ನೀರಲ್ಕೆ ಹಾಗೂ ಲಾವಣ್ಯ ಕಟ್ಟಹುಣಿ ಅವರು ಸಮಿತಿಯ ಸದಸ್ಯರಾಗಿರುತ್ತಾರೆ. ದೇವಳದ ಆಡಳಿತಾಧಿಕಾರಿ ಪಶು ಪರಿವೀಕ್ಷಕ ರಮೇಶ್ ಅವರು ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು.