ಮಂಗಳೂರು: ಮಂಗಳೂರಿನ ಹಲವೆಡೆ ಧಾರ್ಮಿಕ ಶ್ರದ್ಧಾಕೇಂದ್ರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಹಿ ಘಟನೆಗಳು ಮತ್ತೆ ಮತ್ತೆ ಮರುಕಳಿಸದಂತೆ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಮಂಗಳೂರು ಕಮೀಷನರ್ ಎನ್. ಶಶಿಕುಮಾರ್ ಕಠಿಣ ಕ್ರಮಕ್ಕೆ ತರಲು ಮುಂದಾಗಿದ್ದು, ಪೋಲಿಸರ ಜೊತೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಮಂಗಳೂರು ಕಮೀಷನರ್ ವ್ಯಾಪ್ತಿಯಲ್ಲಿ ಯಾವುದೇ ದೂರು ದುಮ್ಮಾನಗಳಿದ್ದರೆ ಕ್ಷಣ ಮಾತ್ರದಲ್ಲಿ ವ್ಯಾಟ್ಸಾಪ್ ಮೂಲಕ ದೂರು ಸಲ್ಲಿಸಬಹುದು +91 9480802300
ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಲವೆಡೆ ಹಲವು ದೇವಾಲಯಗಳು, ದೈವಸ್ಥಾನಗಳಿದ್ದು, ಯಾವುದೇ ಅಹಿತಕರ ಘಟನೆಯ ಪತ್ತೆ ಹಾಗೂ ಮುಂಜಾಗ್ರತೆಗಾಗಿ ಸಿಸಿಟಿವಿ ಅಳವಡಿಸಲು ಆಯಾಯ ಆಡಳಿತ ಮಂಡಳಿಗಳಿಗೆ ಕಮೀಷನರ್ ಮನವಿ ಮಾಡಿದ್ದಾರೆ. ಅಲ್ಲದೇ ಯಾವುದೇ ರೀತಿಯ ದೂರುಗಳಿದ್ದಲ್ಲಿ ತಾವೇ ನಿರ್ವಹಿಸುತ್ತಿರುವ ವ್ಹಾಟ್ಸ್ಯಾಪ್ ನಂಬರ್ ಗೆ ಸಂದೇಶ, ಫೋಟೋ ಅಥವಾ ವಿಡಿಯೋ ಕಳುಹಿಸುವಂತೆ ಮನವಿ ಮಾಡಿದ್ದಾರೆ.
ಈ ವಿಧಾನ ಜನಸ್ನೇಹಿ ಪೋಲಿಸ್ ನ ಹೊಸ ಪ್ರಯೋಗವಾಗಿದ್ದು ಸಾರ್ವಜನಿಕರಿಗೆ ಅತಿ ಸುಲಭವಾಗಿ ಕಮೀಷನರ್ ಅವರ ಜೊತೆ ಸಂವಹನ ಮಾಡಲು ಅನುಕೂಲವಾಗಲಿದೆ ಮತ್ತು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಲು ತಿಳಿಸಿರುತ್ತಾರೆ.