ಮಂಗಳೂರು: ದಕ್ಷಿಣ ಕನ್ನನಡ ಜಿಲ್ಲೆಯಲ್ಲಿ ಇಂದು ಬಾಣಂತಿ ಸಹಿತ ಮೂವರನ್ನು ಮಹಾಮಾರಿ ಕಿಲ್ಲರ್ ಕೊರೋನಾ ಬಲಿ ಪಡೆದಿದ್ದು ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಉಳ್ಳಾಲ ಮೂಲದ 62 ವಯಸ್ಸಿನ ವೃದ್ಧೆ, ಪುತ್ತೂರು ಮೂಲದ 32 ವರ್ಷದ ಮಹಿಳೆ ಹಾಗೂ ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಇಂದು ಕೊರೊನಾಗೆ ಮೃತಪಟ್ಟಿದ್ದಾರೆ. ಇಬ್ಬರು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಮಹಾಮಾರಿ ಅಟ್ಟಹಾಸಕ್ಕೆ ಬಾಣಂತಿ ಬಲಿ!
ಕೊರೋನಾ ಸೋಂಕಿತ ಪುತ್ತೂರು ಮೂಲದ ಬಾಣಂತಿ ಯೊಬ್ಬರು ಇತ್ತೀಚೆಗೆ ಹೆರಿಗೆಗೆಂದು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಆಕೆಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಮಹಿಳೆ ಹೆರಿಗೆಯಾದ ಬಳಿಕ ಮಹಿಳೆ ಮತ್ತು ಹಸುಳೆಯನ್ನು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇದೀಗ ಬಾಣಂತಿ ಆರೋಗ್ಯದಲ್ಲಿ ಏರುಪೇರಾಗಿದ್ದು ಇಂದು ನಸುಕಿನ ಜಾವ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.