ತೋಟಗಾರಿಕೆ ಇಲಾಖೆಯಲ್ಲಿ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

ಬೆಳ್ತಂಗಡಿ: ಬೆಳ್ತಂಗಡಿ ತೋಟಗಾರಿಕೆ ಇಲಾಖೆಯಲ್ಲಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು 09/07/2020 ರಿಂದ 24/07/2020ರ ವರೆಗೆ ಅರ್ಜಿಸಲ್ಲಿಸಬಹುದಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

🔹ತೋಟಗಾರಿಕೆ ಇಲಾಖೆಯಲ್ಲಿ 2020-21 ನೇ ಸಾಲಿನ ಸಮಗ್ರ ಕೀಟ ರೋಗ ನಿಯಂತ್ರಣ ಯೋಜನೆಯಡಿ ಮೈಲುತುತ್ತು ಅಥವಾ ತೋಟಗಾರಿಕೆಯಲ್ಲಿ ಶಿಫಾರಸು ಮಾಡಲಾದ ಸಂರಕ್ಷಕಗಳ ಖರೀದಿಗೆ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ. ರೈತರು ಸಂರಕ್ಷಕಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಿ ಬಿಲ್ಲುಗಳನ್ನು ಜಮೀನಿನ ಪಹಣಿಯ ಪ್ರತಿ, ಬೆಳೆ ದಾಖಲಾತಿ, ಆಧಾರ್ ಪ್ರತಿ ಹಾಗೂ ಬ್ಯಾಂಕ್ ಖಾತೆ ವಿವರಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.

READ ALSO

🔹ತೋಟಗಾರಿಕೆ ಇಲಾಖೆ 2020-21ನೇ ಸಾಲಿನ ಜೇನು ಸಾಕಣಿಕೆಯ ಅಭಿವೃದ್ಧಿ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಿದ್ದು ಆಸಕ್ತರು ಬೇಡಿಕೆಯನ್ನು ನೊಂದಾಯಿಸಬಹುದು.

🔹ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನ ಮಾಡಲಾದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಹುವಾರ್ಷಿಕ ತೋಟದ ಬೆಳೆಗಳು ವಿಸ್ತರಣೆ ಹಾಗೂ ಪುನಶ್ಚೇತನ ಕಾಮಗಾರಿಗಳನ್ನು ವೈಯಕ್ತಿಕವಾಗಿ ಮಾಡಲಿಚ್ಚಿಸುವ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 08256232148, 8277806380