ಬೆಂಗಳೂರು: ರಾಜ್ಯದಲ್ಲಿ ನಿಲ್ಲುತ್ತಿಲ್ಲ ಕೊರೋನಾ ಆರ್ಭಟ ರಾಜ್ಯದಾದ್ಯಂತ ಇಂದು ಮತ್ತಷ್ಟು ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು ಸಾವಿನ ಪ್ರಮಾಣದಲ್ಲೂ ಗಣನೀಯ ಏರಿಕೆಕಾಣುತ್ತಿದ್ದು ರಾಜ್ಯದ ಜನತೆಯನ್ನು ಕಂಗೆಡುವಂತೆ ಮಾಡಿದೆ.
ಇಂದು ರಾಜ್ಯ ರಾಜಧಾನಿ ಬೆಂಗಳೂರು, ಕಡಲತಡಿ ಮಂಗಳೂರಿನಲ್ಲೂ ಕೊರೋನಾಘತವಾಗಿದ್ದು ರಾಜ್ಯದ 28 ಜಿಲ್ಲೆಗಳಿಗೂ ಕೊರೋನಾ ಶಾಕ್ ನೀಡಿದೆ.
ಸಿಲಿಕಾನ್ ಸಿಟಿಗೆ ಶಾಕ್ ಮೇಲೆ ಶಾಕ್ ಕೊಟ್ಟ ಹೆಮ್ಮಾರಿ ಬೆಂಗಳೂರಿನಲ್ಲಿಂದು 1148 ಸೋಂಕಿತರು ಪತ್ತೆ ರಾಜ್ಯರಾಜಧಾನಿಯಲ್ಲಿ ಒಟ್ಟು ಸೋಂಕಿತರು 12509ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 25ಮಂದಿ ರಾಜಧಾನಿಯಲ್ಲಿ ಬಲಿಯಾಗಿದ್ದು ಸಾವಿನ ಸಂಖ್ಯೆ177ಕ್ಕೆ ಏರಿಕೆಯಾಗಿದೆ. ಕಡಲತಡಿ ಮಂಗಳೂರಿನಲ್ಲೂ ಇಂದು 183 ಮಂದಿಗೆ ಸೋಂಕು ದೃಢಪಟ್ಟಿದ್ದು 02 ಮಂದಿ ಬಲಿಯಾಗಿದ್ದಾರೆ
ರಾಜ್ಯದಲ್ಲಿಂದು 2062 ಮಂದಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ28877 ಕ್ಕೆ ಏರಿಕೆಯಾಗಿದೆ
ಕೊರೋನಾ ಮರಣಮೃದಂಗ ದಿನೆದಿನೇ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿಂದು ಹೆಮ್ಮಾರಿ ಹೊಡೆತಕ್ಕೆ 54 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 470ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ಸೋಂಕಿತರ ವಿವರಗಳು: