ಬೆಳ್ತಂಗಡಿಯ ಮುಂಡಾಜೆ ಬಳಿ ರಸ್ತೆಗುರುಳಿದ ಮರ ಸಂಚಾರದಲ್ಲಿ ಅಸ್ತವ್ಯಸ್ತ, ಸ್ಥಳೀಯರಿಂದ ತೆರವು ಕಾರ್ಯ

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73 ಮಂಗಳೂರು- ಚಿಕ್ಕಮಗಳೂರು ರಸ್ತೆಯ ಮುಂಡಾಜೆಯ ಸೋಮಂತಡ್ಕ ಸಮೀಪದ ಅಂಬಡ್ತ್ಯಾರು ಎಂಬಲ್ಲಿ ರಸ್ತೆಗೆ  ಅಡ್ಡಲಾಗಿ ಮರ ಬಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾದ ಘಟನೆ ಗುರುವಾರ ಮುಂಜಾನೆ ನಡೆಯಿತು.

ಇಂದು ಮುಂಜಾನೆ ಸುಮಾರಿಗೆ 6.45ರ ಸುಮಾರಿಗೆ ಬೃಹದಾಕಾರದ ಮರ ರಸ್ತೆಗೆ ಉರುಳಿ ಬಿದ್ದಿದೆ. ಹಾಗಾಗಿ ಕೆಲವು ವಾಹನಗಳು ಬದಲಿ ಗುಂಡಿ ರಸ್ತೆಯಲ್ಲಿ ಸಂಚಾರ ಮುಂದುವರಿಸಿದವು. ಮರ ರಸ್ತೆಗೆ ಉರುಳಿರುವುದರಿಂದ ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ.

READ ALSO

ಇದೇ ರಸ್ತೆಯ ಮೂಲಕ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಾರ್ಕಳ‌ ಶಾಸಕ ಸುನೀಲ್ ಕುಮಾರ್ ಕೂಡಾ ರಸ್ತೆಗೆ ಮರ ಬಿದ್ದ ಕಾರಣ ಸಮಸ್ಯೆಗೆ ಸಿಲುಕಿಕೊಂಡರು.

ಕಾರ್ಕಳ‌ ಶಾಸಕ ಸುನೀಲ್ ಕುಮಾರ್

ಅರಣ್ಯ ಇಲಾಖೆ ಸಿಬಂದಿಗಳು ಸ್ಥಳಕ್ಕಾಗಮಿಸಿ ಮರ ತೆರವು ಮಾಡಿದ್ದಾರೆ. ಸುಮಾರು ಒಂದು ತಾಸು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನ ದಟ್ಟಣೆ ಕಡಿಮೆ ಇರುವ ಕಾರಣ ದೊಡ್ಡ ಮಟ್ಟದಲ್ಲಿ ಯಾವುದೇ  ಸಮಸ್ಯೆಯಾಗಿಲ್ಲ ಎನ್ನಲಾಗಿದೆ.