ವ್ಯಸನ ಮುಕ್ತನಾಗಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ಯುವಕ!!! ಆ ಒಂದು ಮದ್ಯವರ್ಜನ ಶಿಬಿರ ಯುವಕನ ಬದುಕನ್ನೇ ಬದಲಾಯಿಸಿ ಬಿಟ್ಟಿತ್ತೇ!!!? “ಸ್ವಾವಲಂಬಿ ಬದುಕು”

“ಮದ್ಯಮುಕ್ತನಾಗಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ – ಮಂಜು”

ತುಮಕೂರು ತಾಲೂಕಿನ ಅಂತರಸನಹಳ್ಳಿ ಯ ದಿವಂಗತ ವೀರಭದ್ರಪ್ಪನವರ ಮಗನಾದ 34 ವರ್ಷ ವಯಸ್ಸಿನ ಶ್ರೀ ಮಂಜುರವರು ಕಳೆದ 2 ವರ್ಷಗಳ ಹಿಂದೆ ತುಮಕೂರಿನ ಹೋಟೆಲ್ ಅಸೋಸಿಯೇಷನ್ ನಲ್ಲಿ ನಡೆದ ಮದ್ಯವರ್ಜನ ಶಿಬಿರಕ್ಕೆ ಸೇರಿ ಇದೀಗ ಸಂಪೂರ್ಣ ಪಾನಮುಕ್ತರಾಗಿ ಸ್ವತ: ಶ್ರೀ ಗಣೇಶ ಗೋಬಿ ಸೆಂಟರ ನ್ನು ಪ್ರಾರಂಭಿಸಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.


ತಂದೆ ವೀರಭದ್ರಯ್ಯ ನವರು ಅಡುಗೆ ಕೆಲಸ ಮಾಡುತ್ತಿದ್ದು ಅವರೂ ಮದ್ಯಪಾನ ಸೇವಿಸುತ್ತಿದ್ದರು…..!
ಸಣ್ಣ ವಯಸ್ಸಿನಲ್ಲಿ ತನ್ನ ಗೆಳೆಯರ ಸಹವಾಸದಿಂದ ಕುಡಿತ ಪ್ರಾರಂಭಿಸಿ ದಿನೇ ದಿನೇ ಕುಡಿತದ ಪ್ರಮಾಣ ಜಾಸ್ತಿಯಾಗುತ್ತಾ ಬಂತು… ತಂದೆ ಬುದ್ಧಿ ಹೇಳಿದರು ಏನೂ ಪ್ರಯೋಜನವಾಗಲಿಲ್ಲ…!! ಕಾರಣ ಅವರೂ ಮದ್ಯವ್ಯಸನಿಯಾಗಿದ್ದ ರು.
ತುಮಕೂರು ಸಿಟಿಯಲ್ಲಿ ಇದ್ದ ಎಲ್ಲಾ ವೈನ್ ಶಾಪ್ ಮತ್ತು ಬಾರ್ ಗಳ ಪರಿಚಯ ಈ ಕುಡಿತದಿಂದ ಆಗಿತ್ತು….!!!
ಕುಡಿತ ಎಷ್ಟು ವಿಪರೀತವಾಗಿತ್ತು ಎಂದರೆ ತಾನು 5 10 ರೂಗಳನ್ನು ಭಿಕ್ಷೆಬೇಡಿಯೂ ಕುಡಿತ ಮಾಡಿಕೊಂಡು ಬಂದ ದಿನಗಳನ್ನು ಈಗ ನೆನಪಿಸಿಕೊಂಡು ಹಳೇ ಜೀವನ ಬಹಳ ಅಸಹ್ಯವಾಗಿತ್ತು…. ಮತ್ತು ಸಮಾಜದಲ್ಲಿ, ಊರಲ್ಲಿ, ಮನೆಯಲ್ಲಿ ಒಂದು ಚೂರು ಮರ್ಯಾದೆಯೇ ಇರಲಿಲ್ಲ!!!! ದಿನಕ್ಕೆ ಅಡುಗೆ ಕೆಲಸ ಮಾಡಿ 500 ರಿಂದ 600 ರೂಪಾಯಿ ಸಂಪಾದಿಸಿದರೂ ಸಂಜೆ ಮನೆಗೆ ಬರಲು ಒಂದು ರೂಪಾಯಿ ಉಳಿಯುತ್ತಿರಲಿಲ್ಲ……..
6 ವರ್ಷಗಳ ಹಿಂದೆ ತಂದೆ ತೀರಿಕೊಂಡರೂ ಬುದ್ಧಿ ಬರಲಿಲ್ಲ,!!! 2011ರಲ್ಲಿ ಮನೆಯಲ್ಲಿ ನಡೆದ ದೊಡ್ಡದೊಂದು ಸಮಸ್ಯೆಯಿಂದ ಕುಡಿತದ ಪ್ರಮಾಣ ಇನ್ನೂ ಜಾಸ್ತಿಯಾಯಿತು. ತಾಯಿಗೆ ಒಂದು ಚೂರು ಪ್ರೀತಿ ಗೌರವ ನೀಡಲಿಲ್ಲ!!! ಬದಲಾಗಿ ಮಾನಸಿಕ ಹಿಂಸೆ ನೀಡುತ್ತಿದ್ದರು…….


ಕಳೆದ 2 ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರ ದಿಂದ ತನ್ನ ಜೀವನ ಪಾವನವಾಯಿತು…. ಮತ್ತು ಕಳೆದ 3 ತಿಂಗಳ ಹಿಂದೆ ಸಮಾಜದಲ್ಲಿ ಸ್ವಾವಲಂಬಿಯಾಗಿ ಸಾಧನೆಯನ್ನು ಮಾಡಿ ಗೌರವಯುತವಾದ ಜೀವನವನ್ನು ನಡೆಸುವ ಛಲವನ್ನು ಹೊತ್ತುಕೊಂಡು 50000 ಸ್ವತ: ದುಡಿಮೆ ಮಾಡಿ , & ಇತರರ ಸಹಕಾರದಿಂದ ತನ್ನ ತಾಯಿಯ ಮಾರ್ಗದರ್ಶನದಿಂದ 2 ಲಕ್ಷ ರೂಪಾಯಿ ಬಂಡವಾಳ ಹಾಕಿ ತುಮಕೂರಿನ ಯಲ್ಲಾಪುರ ರಸ್ತೆ ಅಂತರಸನಹಳ್ಳಿ ಯಲ್ಲಿ ಶ್ರೀ ಗಣೇಶ ಗೋಬಿ ಸೆಂಟರನ್ನು ಪ್ರಾರಂಭಿಸಿರುತ್ತಾರೆ. ಇಲ್ಲಿ ಗೋಬಿ ಮಂಚೂರಿ ಪಾನಿಪುರಿ ಫ್ರೈಡ್ ರೈಸ್ ಹಾಗು ಎಲ್ಲಾತರದ ತಂಪು ಪಾನೀಯಗಳನ್ನು ಸ್ವತಹ ತಾವೇ ತಯಾರಿಸಿ ವ್ಯಾಪಾರ ಮಾಡಿ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ.

ಕುಡಿತದ ಸಂದರ್ಭದಲ್ಲಿ ಯಾರು ಕೂಡ ಇವರ ಮೇಲೆ ವಿಶ್ವಾಸವಿಲ್ಲ ದವರು ಈ ಅಂಗಡಿ ತೆರೆಯಲು ಎಲ್ಲರೂ ಸಹಕಾರ ನೀಡಿರುತ್ತಾರೆ…!! ಸೆಂಟರ್ ಪ್ರಾರಂಭಿಸುವಾಗ ಧರ್ಮಸ್ಥಳದ ಪ್ರಸಾದ ಕಾಯಿ ಯನ್ನು ಇಟ್ಟು ಪೂಜೆಮಾಡಿ ಉದ್ಘಾಟನೆ ಮಾಡಿರುತ್ತಾರೆ.
ಈ ಎಲ್ಲಾ ಸಾಧನೆಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ, ಪೂಜ್ಯ ಹೆಗ್ಗಡೆಯವರ ಆಶೀರ್ವಾದ & ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಜನಜಾಗೃತಿ ವೇದಿಕೆಯ ಕಾರ್ಯಕರ್ತರ ಶ್ರಮದಿಂದ ಸಾಧ್ಯವಾಗಿದೆ ಎಂದು ತಾಯಿ ಮಗ ಇಬ್ಬರು ಸಂತೋಷವನ್ನು ವ್ಯಕ್ತಪಡಿಸುತ್ತಾರೆ.

Spread the love
  • Related Posts

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    Belthangady: ತಾಲೂಕಿನ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.Shishila, Kokkada, Dharmasthala, Arasinamakki, Ujire ಹಾಗೂ Nidle ಮೊದಲಾದ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.ತಾಲೂಕಿನಲ್ಲಿ ಫೆಬ್ರವರಿ 21ರಂದು ಕೆಲವೆಡೆ…

    Spread the love

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಬಂಗಾಡಿ: ಸೂರ್ಯ-ಚಂದ್ರ ಹೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳವು ಶ್ರೀ…

    Spread the love

    You Missed

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 61 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 101 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    • By admin
    • March 14, 2026
    • 43 views
    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ  ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    • By admin
    • March 13, 2026
    • 610 views
    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • By admin
    • March 10, 2026
    • 150 views
    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ

    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ

    • By admin
    • March 10, 2026
    • 63 views
    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ