ಯೋಗ ವನ ಬೆಟ್ಟಗಳ ಸ್ಥಾಪಕ, ಆಯುರ್ವೇದ ಪಂಡಿತ ಕರ್ಪದಿ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯ

ಚಿತ್ರದುರ್ಗ: ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಯೋಗ ವನ ಬೆಟ್ಟಗಳ ಸ್ಥಾಪಕ, ಆಯುರ್ವೇದ ಪಂಡಿತ ಕರ್ಪದಿ ಸಿದ್ದಲಿಂಗ ಸ್ವಾಮೀಜಿ(75) ಶನಿವಾರ ಸಂಜೆ ಲಿಂಗೈಕ್ಯರಾಗಿದ್ದಾರೆ.

ಇವರು 30 ವರ್ಷಗಳ ಹಿಂದೆ ಚಿತ್ರದುರ್ಗದ ಮುರುಘಾಮಠದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಸಿದ್ದಲಿಂಗ ಸ್ವಾಮೀಜಿಯಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.

ಇವರು ಬೆಂಗಳೂರಿನ ಕನಕಪುರದ ಗೊಲ್ಲರಪಾಳ್ಯದಲ್ಲಿ ಮೊದಲ ಯೋಗವನ ಬೆಟ್ಟವನ್ನು ಸ್ಥಾಪಿಸಿದರು. ನಂತರ ಕುಣಿಗಲ್‌ ಹಾಗೂ 4 ವರ್ಷಗಳ ಹಿಂದೆ ಚಿತ್ರದುರ್ಗ ಹಾಗೂ ಆಲೂರು ತಾಲೂಕಿನ ಮರಸು ಗ್ರಾಮದಲ್ಲೂ ಇತ್ತೀಚೆಗೆ ಯೋಗವನ ಬೆಟ್ಟವನ್ನು ಸ್ಥಾಪಿಸಿದ್ದರು.

ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲೋಪತಿ ಚಿಕಿತ್ಸೆಯನ್ನು ನಿರಾಕರಿಸಿದ್ದ ಶ್ರೀಗಳು, ಆಯುರ್ವೇದ ಔಷಧವನ್ನೇ ಸೇವಿಸುತ್ತಿದ್ದರು ಎನ್ನಲಾಗಿದೆ.

ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಕುಣಿಗಲ್‌ ಯೋಗವನ ಬೆಟ್ಟಕ್ಕೆ ಕರೆತಂದು ರಾತ್ರಿಯೇ ಅವರ ಪೂರ್ವಾಶ್ರಮದ ಸ್ವ ಸ್ಥಳ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮರಸು ಗ್ರಾಮಕ್ಕೆ ಕೊಂಡೊಯ್ಯಲಾಗಿದೆ.

ಭಾನುವಾರ ಮಧ್ಯಾಹ್ನ ಬಸವತತ್ವ ವಿಧಿಯಾನುಸಾರ ಸ್ವಾಮೀಜಿ ಅವರ ಅಂತಿಮ ಸಂಸ್ಕಾರ ನೇರವೇರಲಿದೆ.

Spread the love
  • Related Posts

    ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಅಬ್ಬರ – ಕಾಶ್ಮೀರದಂತಾದ ದೃಶ್ಯ, ಸಂಚಾರಕ್ಕೆ ಅಡಚಣೆ

    ಹುಬ್ಬಳ್ಳಿ: ಉತ್ತರ ಕರ್ನಾಟಕದ ಹಲವೆಡೆ ಮಂಗಳವಾರ ಸಂಜೆ ಭಾರೀ ಆಲಿಕಲ್ಲು ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕಲಘಟಗಿ, ಹುಬ್ಬಳ್ಳಿ, ಕುಂದಗೋಳ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಸುರಿದ ಆಲಿಕಲ್ಲು ಮಳೆ ಕಾಶ್ಮೀರದ ವಾತಾವರಣವನ್ನು ನೆನಪಿಸಿತು. ಕಲಘಟಗಿ ಮತ್ತು ಕುಂದಗೋಳ ಭಾಗಗಳಲ್ಲಿ ಆಲಿಕಲ್ಲು ರಾಶಿ…

    Spread the love

    ಕನ್ಯಾಡಿ ಸೇವಾಭಾರತಿಯಿಂದ ಶಿರಸಿಯಲ್ಲಿ 3 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

    ಶಿರಸಿ : ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಅದರಂತೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಲಾಗಿತ್ತು. ಈ ತಿಂಗಳಲ್ಲಿ 32 ಗಾಲಿಕುರ್ಚಿಗಳನ್ನು…

    Spread the love

    You Missed

    ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಅಬ್ಬರ – ಕಾಶ್ಮೀರದಂತಾದ ದೃಶ್ಯ, ಸಂಚಾರಕ್ಕೆ ಅಡಚಣೆ

    • By admin
    • March 18, 2026
    • 34 views
    ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಅಬ್ಬರ – ಕಾಶ್ಮೀರದಂತಾದ ದೃಶ್ಯ, ಸಂಚಾರಕ್ಕೆ ಅಡಚಣೆ

    ಕನ್ಯಾಡಿ ಸೇವಾಭಾರತಿಯಿಂದ ಶಿರಸಿಯಲ್ಲಿ 3 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

    • By admin
    • March 18, 2026
    • 24 views
    ಕನ್ಯಾಡಿ ಸೇವಾಭಾರತಿಯಿಂದ ಶಿರಸಿಯಲ್ಲಿ 3 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

    ಉಜಿರೆ: ಶುಭ ಜ್ಯುವೆಲ್ಲರ್ಸ್‌ನಲ್ಲಿ “ಶುಭ-ಗೋಲ್ಡ್” ಯೋಜನೆ ಆರಂಭ

    • By admin
    • March 17, 2026
    • 163 views
    ಉಜಿರೆ: ಶುಭ ಜ್ಯುವೆಲ್ಲರ್ಸ್‌ನಲ್ಲಿ “ಶುಭ-ಗೋಲ್ಡ್” ಯೋಜನೆ ಆರಂಭ

    ಎಕ್ಸೆಲ್ ಪಿಯು ಕಾಲೇಜು ಗುರುವಾಯನಕೆರೆಯಲ್ಲಿ ನೀಟ್, ಜೆಇಇ, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕ್ರಾಶ್ ಕೋರ್ಸ್

    • By admin
    • March 16, 2026
    • 38 views
    ಎಕ್ಸೆಲ್ ಪಿಯು ಕಾಲೇಜು ಗುರುವಾಯನಕೆರೆಯಲ್ಲಿ ನೀಟ್, ಜೆಇಇ, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕ್ರಾಶ್ ಕೋರ್ಸ್

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 81 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 114 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ