ಬೆಳ್ತಂಗಡಿ: ಮೆಸ್ಕಾಂ ಎಂದರೆ ದೂರುವರೇ ಹೆಚ್ಚು ದಿನಬೇಳಗಾದ್ರೆ ಮನೆ ಮನೆಗಳಲ್ಲಿ ನಿರಂತರ ಬೆಳಕು ಉರಿಯುತ್ತಲೆ ಇರಬೇಕು ಇಲ್ಲದಿದ್ದರೆ ಮನೆ ಮಾಲೀಕನಿಂದ ಹಿಡಿದು ಕುಟುಂಬದ ಎಲ್ಲಾ ಸದಸ್ಯರು ಹಿಡಿಶಾಪ ಹಾಕೋದು ಮಾತ್ರ ಮೆಸ್ಕಾಂ ಇಲಾಖೆ ಅಥವಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆದರೆ ಯಾವತ್ತೂ ಅಂತವರ ಬಗ್ಗೆ ಕಾಳಜಿ ತೋರಿಸುವವರ ಸಂಖ್ಯೆ ಬಲು ವಿರಳ.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪದಲ್ಲಿ 33kv ವಿದ್ಯುತ್ ಹರಿಯುವ ಹೈಟೆನ್ಷನ್ ವೈಯರ್ ಗಳಿಗೆ ಮರದ ಕೊಂಬೆ ಸಿಲುಕಿ ದೊಡ್ಡಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಾಗ ಸ್ಥಳೀಯ ಯುವಕರು ಘಟನೆಯ ಬಗ್ಗೆ ಮೊಬೈಲ್ ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಬಗ್ಗೆ ತಾಲೂಕಿನ ಸಾಮಾಜಿಕ ಕಳಕಳಿಯುಳ್ಳ ಅಧಿಕಾರಿಯೊಬ್ಬರು ಸುಮಾರು 9ಗಂಟೆ ಆಸುಪಾಸಿನಲ್ಲಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ತಕ್ಷಣವೇ ಕಾರ್ಯಪ್ರವೃತ್ತರಾದ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳನ್ನು ಕಳುಹಿಸಿ ಮಧ್ಯರಾತ್ರಿ 12.30ರ ವೇಳೆಯಲ್ಲಿ 3ಜನರ ತಂಡವೊಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮರದ ರೆಂಬೆ ಕೊಂಬೆಗಳನ್ನು ತೆರವುಗೊಳಿಸಿ ಮುಂದೆ ಆಗುವ ಅನಾಹುತಗಳಿಗೆ ತಡರಾತ್ರಿಯೇ ತೆರೆ ಎಳೆದಿದ್ದಾರೆ ಈ ಕಾರ್ಯದಲ್ಲಿ ಶ್ರಮಿಸಿದ ಮೋಹನ್, ಪ್ರವೀಣ್, ಕೇಶವ್ ರವರು ಶ್ರಮಿಸಿದ್ದು ಈ ತಂಡಕ್ಕೆ ಹಾಗೂ ಸಹಕರಿಸಿದ ಅಧಿಕಾರಿವೃಂದಕ್ಕೂ ಕಾಲನಿರ್ಣಯನ್ಯೂಸ್ ವತಿಯಿಂದ ಹಾಗೂ ಗ್ರಾಮಸ್ಥರ ಪರವಾಗಿ ಧನ್ಯವಾದಗಳು.