ಮಂಗಳೂರು (ನ. 18) MESCOM ಅಧ್ಯಕ್ಷರಾದ ಶ್ರೀ ಕೆ ಹರೀಶ್ ಕುಮಾರ್ ರವರನ್ನು ಸೇವಾಧಾಮದ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ಮತ್ತು ತಂಡವು ನವೆಂಬರ್ 18 ರಂದು ಭೇಟಿ ನೀಡಿ ಸೇವಾಭಾರತಿಯ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕೆ CSR ಅನುದಾನವನ್ನು ಒದಗಿಸಿಕೊಡುವಂತೆ ಮನವಿ ಮಾಡಲಾಯಿತು. ಶ್ರೀಯುತರು ಕಟ್ಟಡ ನಿರ್ಮಾಣ ಶೀಘ್ರ ನೆರವೇರುವಂತೆ ಶುಭ ಹಾರೈಸಿದರು.





