ದೊಡ್ಡಪತ್ರೆ/ ಸಾಂಬಾರು ಬಳ್ಳಿ/ಸಾಂಬ್ರಾಣಿ ಎಲೆಯ ಆರೋಗ್ಯ ಪ್ರಯೋಜನಗಳು

ದೊಡ್ಡಪತ್ರೆ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಸ್ಯಕ್ಕೆ ಪಾಷಾಣ ಭೇಧಿ, ಕರ್ಪೂರವಳ್ಳಿ, ಸಾಂಬಾರು ಬಳ್ಳಿ, ಸಾಂಬ್ರಾಣಿ ಎಲೆ ಎಂದೂ ಕರೆಯುತ್ತಾರೆ. ಇದರ ಎಲೆಗಳು ದೊಡ್ಡದಾಗಿ ಮತ್ತು ದಪ್ಪವಾಗಿದ್ದು ಕಡು ಸುವಾಸನೆ ಹೊಂದಿರುತ್ತದೆ.

READ ALSO

doddapathre

ಸಾಮಾನ್ಯವಾಗಿ ದೊಡ್ಡಪತ್ರೆಯನ್ನು ಜ್ವರ, ಶೀತ, ಕೆಮ್ಮುಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ.

ದೊಡ್ಡಪತ್ರೆ ಎಲೆಗಳನ್ನು ಜಜ್ಜಿ ರಸ ತೆಗೆದು ಅದನ್ನು ಜೇನಿನೊಂದಿಗೆ ಬೆರೆಸಿ ಕುಡಿಯುವುದರಿಂದ ಕಫ, ಬೇಧಿ ಕಡಿಮೆಯಾಗುತ್ತದೆ.
ಪದೇಪದೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಫ ಕೆಮ್ಮು ಶೀತಕ್ಕೆ 4 ರಿಂದ 5 ಸಾಂಬ್ರಾಣಿ ಎಲೆಗಳನ್ನು ಕೆಂಡದಲ್ಲಿ ಬಾಡಿಸಿ ಅದರ ರಸವನ್ನು ಹಿಂಡಿ ಜೇನಿನ ಜೊತೆ ಸೇರಿಸಿ ಕುಡಿಸಿದರೆ ಕೆಮ್ಮು, ಕಫ ಕಡಿಮೆಯಾಗುತ್ತದೆ. ಶೀತದಿಂದ ಮಕ್ಕಳಿಗೆ ಮಲಬದ್ಧತೆಯಾದರೆ ದೊಡ್ಡಪತ್ರೆ ಎಲೆಯ ರಸಕ್ಕೆ ಜೇನುತುಪ್ಪವನ್ನು ಸೇರಿಸಿ ಕುಡಿಸಬೇಕು.

doddapathre

ಚೇಳು ಕಡಿದ ಜಾಗಕ್ಕೆ ದೊಡ್ಡಪತ್ರೆ ರಸವನ್ನು ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.
ದೊಡ್ಡಪತ್ರೆ ಎಲೆಯ ಜೊತೆಗೆ ಉಪ್ಪನ್ನು ಸೇರಿಸಿ ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.

ತುರಿಕೆ, ಕಜ್ಜಿ ಅಥವಾ ಬೆವರುಸಾಲೆ ಬಿದ್ದರೆ, ಆ ಜಾಗಕ್ಕೆ ಹಸಿ ಸಾಂಬ್ರಾಣಿ ಎಲೆಗಳನ್ನು ಅರೆದು ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ.

ದೊಡ್ಡಪತ್ರೆ ಎಲೆಯಲ್ಲಿ ವಿಟಮಿನ್ ಎ ಹಾಗೂ ಸಿ ಹೇರಳವಾಗಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಔಷಧೀಯ ಗುಣಗಳನ್ನು ಹೊಂದಿರುವ ದೊಡ್ಡಪತ್ರೆಯ ಎಲೆಗಳಿಂದ ನಾನಾ ಖಾದ್ಯಗಳನ್ನು ಕೂಡ ಸಿದ್ಧಪಡಿಸಬಹುದಾಗಿದೆ.