ಬೆಂಗಳೂರು ಭಾರೀ ಶಬ್ದದೊಂದಿಗೆ ಭೂ ಕಂಪನ: ಬೆಚ್ಚಿ ಬಿದ್ದ ಜನತೆ..!

ಬೆಂಗಳೂರು: ಭಾರೀ ಶಬ್ದದೊಂದಿಗೆ ಭೂ ಕಂಪಿಸಿದ ಘಟನೆಯು ರಾಜಧಾನಿ ಬೆಂಗಳೂರು ಸುತ್ತಮುತ್ತ ನಡೆದಿದೆ.ನಗರದಲ್ಲಿ ಇಂದು ಸ್ಫೋಟದ ಸದ್ದಿನೊಂದಿಗೆ ಭೂಕಂಪನದ ಅನುಭವವಾಗಿದೆ. ಸುಮಾರು 11.30ರಿಂದ 12-15ರ ಸಮಯದಲ್ಲಿ ಶಬ್ದ ಕೇಳಿಬಂದಿದ್ದು, ಜನರು ಭಯಭೀತರಾಗಿದ್ದರು.

ಭಾರಿ ಶಬ್ದದಿಂದ ನಗರದ ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ಆರ್.ಆರ್. ನಗರ, ಕಗ್ಗಲಿಪುರದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿತ್ತು.ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸ್ಥಳೀಯವಾಗಿ ಭೂಕಂಪನದ ಯಾವುದೇ ಮಾಹಿತಿ ದಾಖಲಾಗಿಲ್ಲ. ಭೂಕಂಪ ಮಾಪನ ಸಿಸ್ಮೋಗ್ರಾಫ್​​ನಲ್ಲಿ ಭೂಕಂಪನವಾದ ಮಾಹಿತಿ ಇಲ್ಲದಿರುವುದರಿಂದ ಭೂಕಂಪನ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.

READ ALSO