ಕೋವಿಡ್ ನಿರ್ವಹಣೆಗಾಗಿ ಸಚಿವರ 1 ವರ್ಷದ ಹಾಗೂ ಶಾಸಕರ 1 ತಿಂಗಳ ವೇತನ ಕಡಿತಕ್ಕೆ ನಿರ್ಧಾರ

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ 14 ದಿನಗಳ ಲಾಕ್ ಡೌನ್ ಮಾದರಿ ಜನತಾ ಕರ್ಫ್ಯೂ ಜಾರಿ ಮಾಡಿದ್ದು, ಇದರ ಬೆನ್ನಲ್ಲೇ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆ ಎದುರಾಗಿದೆ. ಇದೀಗ ಆರ್ಥಿಕ ಸಂಕಷ್ಟದ ನಡುವೆ ಕೋವಿಡ್ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಸಚಿವರು ಹಾಗೂ ಶಾಸಕರ ವೇತನ ಕಡಿತಕ್ಕೆ ನಿರ್ಧರಿಸಿದೆ.

ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಎಲ್ಲಾ ಸಚಿವರ ಸಚಿವರ 1 ವರ್ಷದ ವೇತನ ಹಾಗೂ ಶಾಸಕರ 1 ತಿಂಗಳ ವೇತನವನ್ನು ಕಡಿತಗೊಳಿಸಿ, ಕೋವಿಡ್ ಪರಿಹಾರ ನಿಧಿಗೆ ಬಳಸಲು ನಿರ್ಧರಿಸಲಾಗಿದೆ.

READ ALSO

ಲಾಕ್ ಡೌನ್ ನಷ್ಟ ಸರಿದೂಗಿಸಿ ಕೊರೊನಾ ನಿರ್ವಹಣೆಗೆ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.