ಬೆಳ್ತಂಗಡಿ ಮೂಲದ ಉದ್ಯಮಿಯನ್ನು ಶಿರಸಿ ಮುಂಡಗೋಡದಲ್ಲಿ ಹತ್ಯೆಗೈದ ದುಷ್ಕರ್ಮಿಗಳು

ಬೆಳ್ತಂಗಡಿ: ರಿಯಲ್ ಎಸ್ಟೇಟ್ ಹಾಗೂ ಪ್ಲೈವುಡ್ ವ್ಯವಹಾರ ನಡೆಸುತ್ತಿದ್ದ ಮೂಲತಃ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ನಿವಾಸಿ ಪ್ರಸ್ತುತ ಧಾರವಾಡದಲ್ಲಿ ನೆಲೆಸಿರುವ ಉದ್ಯಮಿ ಸುದರ್ಶನ್ ಯಾನೆ ಹರ್ಷ ಎಂಬವರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಶಿರಸಿ ಮುಂಡಗೋಡ ತಾಲೂಕಿನ ಬಡ್ಡಿಗೇರಿಯಲ್ಲಿ ನಡೆದಿದೆ.

ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ತಂಡ ಹರ್ಷರವರು ಸಂಚರಿಸುತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ‌ ಹೊಡೆಸಿದ್ದು ಈ ವೇಳೆ ಕೆಳಗೆ ಬಿದ್ದ ಇವರ ಮೇಲೆ ತಲ್ವಾರ್​ನಿಂದ​ ದಾಳಿ ನಡೆಸಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

READ ALSO

ಇವರು ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಉದ್ಯಮ ನಡೆಸುತ್ತಿದ್ದರು ಹಾಗೂ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.