ಮಂಗಳೂರು: ಕೊರೋನಾ ಮಹಾಮಾರಿ ಅದೆಷ್ಟು ಕ್ರೂರಿ ಎಂದರೆ ಎಳೆ ಮಕ್ಕಳಿಂದ ಹಿಡಿದು ಹಿರಿವಯಸ್ಕರನ್ನು ಬಿಡದೇ ಕಾಡುತ್ತಿದೆ. ಇದೀಗ ಕರಾವಳಿಯ ಶಾಸಕರೊಬ್ಬರನ್ನು ಕೊರೋನಾ ಕಾಟ ಕಾಡಿದ್ದು ಕರಾವಳಿಯ ಜನತೆಯನ್ನುಬೆಚ್ಚಿಬೀಳಿಸುವವಂತೆ ಮಾಡಿದೆ.
ಕೊರೋನಾ ಸೋಂಕಿತರ ಸಂಪರ್ಕದಿಂದ
ಮಂಗಳೂರಿನ ಶಾಸಕ ರೊಬ್ಬರಿಗೆ ಸೋಂಕು ತಗುಲಿದ್ದು ತಪಾಸಣೆ ವೇಳೆ ಸೋಂಕು ದೃಢ ಪಟ್ಟಿದೆ. ಹಲವು ಕಾರ್ಯಕ್ರಮಗಳಲ್ಲಿ ಶಾಸಕರು ಭಾಗಿಯಾಗಿದ್ದರೆಂದು ತಿಳಿದು ಬಂದಿದ್ದು ಇದೀಗ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ.