
ಮಂಗಳೂರು: ನಗರದ ಹೃದಯ ಭಾಗದಲ್ಲಿ ಬಿಜೈ ಕಾಪಿಕಾಡ್ ನಲ್ಲಿ ಪುಟ್ಟದಾದ ಅಂಗನವಾಡಿ ಕೇಂದ್ರವಿದೆ. ಪುಟ್ಟ ಪುಟ್ಟ ಮಕ್ಕಳು ಈ ಅಂಗನವಾಡಿ ಕೇಂದ್ರದಲ್ಲಿ ಕಲಿಯುತ್ತಿದ್ದಾರೆ. ಈ ಶಾಲೆ ಅಭಿವೃದ್ಧಿ ಪಡಿಸಬೇಕೆಂಬ ಉದ್ದೇಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ದಾನಿಗಳ ಮೂಲಕ ಈ ಅಂಗನವಾಡಿ ಕೇಂದ್ರಕ್ಕೆ ಹಲವು ಮೂಲಭೂತ ಸೌಕರ್ಯ ಒದಗಿಸಿದ್ದು ಮಕ್ಕಳಿಗೆ ಆಟಿಕೆ ಸಾಮಗ್ರಿ, ಛತ್ರಿ, ಸಮವಸ್ತ್ರ ನೀಡಲಾಗಿದೆ.

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಈ ಅಂಗನವಾಡಿ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಘಟಕ, ಪುಟಾಣಿಗಳಿಗೆ ಸಮವಸ್ತ್ರ ನೀಡಿದ್ದಾರೆ. ಮಂಗಳೂರು ಸ್ಮಾರ್ಟ್ ಸಿಟಿ ಮಹಾ ಪ್ರಬಂಧಕ ಈ ಅಂಗನವಾಡಿ ಶಾಲೆಗೆ ಶನಿವಾರ ಭೇಟಿ ನೀಡಿ ಅಂಗನವಾಡಿ ಕೇಂದ್ರಕ್ಕೆ ಆಹಾರ ಸುರಕ್ಷತಾ ಪೆಟ್ಟಿಗೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಮಂಗಳೂರು ಸ್ಮಾರ್ಟ್ ಸಿಟಿ ಮೂಲಕ ಈ ಅಂಗನವಾಡಿ ಕೇಂದ್ರವನ್ನು ಸ್ಮಾರ್ಟ್ ಅಂಗನವಾಡಿ ಕೇಂದ್ರ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಮಂಗಳೂರು ನಗರದ ಅಂಗನವಾಡಿ ಕೇಂದ್ರವೊಂದು ಸ್ಮಾರ್ಟ್ ರೂಪ ಪಡೆದುಕೊಳ್ಳಲಿದೆ. ಮಂಗಳೂರು ನಲ್ಲಿ ಇದೇ ಮೊದಲ ಬಾರಿಗೆ ಅಂಗನವಾಡಿ ಕೇಂದ್ರ ಸ್ಮಾರ್ಟ್ ಆಗಲಿದೆ. ಅಂದ ಹಾಗೆ ಈ ಶಾಲೆಯಲ್ಲಿ ಯಾರ ಶ್ರೀಮಂತರ ಮಕ್ಕಳು ಕಲಿಯುದಿಲ್ಲ. ಈ ಶಾಲೆಯಲ್ಲಿ ಕಲಿಯುವ ಮಕ್ಕಳು ಬಹುತೇಕರು ಕಟ್ಟಡ ಕಾರ್ಮಿಕರ ಮಕ್ಕಳು. ಆದ್ರೆ ಪ್ರತಿಭೆ ಯಲ್ಲಿ ಕಲಿಯುವುದರಲ್ಲಿ ಇಲ್ಲಿಯ ಮಕ್ಕಳು ಎಲ್ ಕೆ ಜಿ, ಯು ಕೆ ಜಿ ಮಕ್ಕಳಿಗಿಂತಲೂ ಸ್ಮಾರ್ಟ್ ಇದ್ದಾರೆ.ಈ ಅಂಗನವಾಡಿ ಶಿಕ್ಷಕಿ ನಂದಾ ಮಕ್ಕಳಿಗೆ ಸದಾ ಚಟುವಟಿಕೆಯಲ್ಲಿ, ಲವಲವಿಕೆ ಇರುವಂತೆ ನೋಡಿಕೊಳ್ಳುತಿದ್ದಾರೆ. ಈ ಅಂಗನವಾಡಿ ಕೇಂದ್ರ ಮಾದರಿಯಾಗಿ ಬೆಳೆಯುವುದರ ಜೊತೆಗೆ ಜಿಲ್ಲೆಗೆ ಮಾದರಿಯಾಗಲಿ.