ಮಂಗಳೂರು: ಜಿಲ್ಲಾ ಪೊಲೀಸ್ ಇಲಾಖೆ ಯ ಸಿಬ್ಬಂದಿಗಳ ವಾರ್ಷಿಕ ಕ್ರೀಡಾಕೂಟ ಇತ್ತಿಚೆಗೆ ಮಂಗಳೂರು ಪೊಲೀಸ್ ಕ್ರೀಡಾಂಗಣದಲ್ಲಿ ನಡೆಯಿತು.
ವಿವಿಧ ಆಟೋಟಗಳಲ್ಲಿ ಪುರುಷರ ವಿಭಾಗದ ಚಾಂಪಿಯನ್ ಆಗಿ ಜಿಲ್ಲಾ ಪೊಲೀಸ್ ನ ರಾಧಕೃಷ್ಣ ಗೌಡ, ಮಹಿಳಾ ವಿಭಾಗದಲ್ಲಿ ವನೀತಾ ಅವರು ಪ್ರಶಸ್ತಿ ಪಡೆದರು. ತಂಡ ಪ್ರಶಸ್ತಿ: ಡಿ.ಎ.ಆರ್/ಡಿ.ಪಿ.ಓ ತಂಡದ ಪಾಲಾಯಿತು.
ಸಮಾರೋಪ ಸಮಾರಂಭದಲ್ಲಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಾದ ದೇವಜ್ಯೋತಿ ರೇ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಡಿ.ಎ.ಆರ್ ಘಟಕದ ಪೊಲೀಸ್ ನಿರೀಕ್ಷಕರಾದ ನಾರಾಯಣ ಪೂಜಾರಿ, ಜಿಲ್ಲೆಯ ಪೊಲೀಸ್ ಉಪಾಧಿಕ್ಷಕರುಗಳು, ನಿರೀಕ್ಷಕರುಗಳು, ಉಪ ನಿರೀಕ್ಷಕರುಗಳು ಉಪಸ್ಥಿತರಿದ್ದರು.
ಸಮಾರೋಪ ಸಭೆಯ ನಂತರ ಮನರಂಜನೆಗಾಗಿ ಪೊಲೀಸ್ ಸಿಬ್ಬಂದಿಗಳಿಂದ ಕೊರೊನಾ ವಾರಿಯರ್ಸ್, ಕರ್ನಾಟಕ ವೈಭವ, ಶ್ವೇತಾ ಕುಮಾರ ಛದ್ಮವೇಶ ನಡೆಯಿತು.
ಡಿ.ಎ.ಆರ್ ತಂಡವು ಪ್ರಸ್ತುತ ಪಡಿಸಿದ ಕೊರೊನಾ ವಾರಿಯರ್ಸ್ ನ ಕೊರೊನಾಕ್ಕೆ ಧರ್ಮವಿಲ್ಲ ಎಂಬ ಉತ್ತಮ ಸಂದೇಶ ನೀಡಿದ ಛದ್ಮವೇಷ ಸೇರಿದವರ ವಿಶೇಷ ಪ್ರಶಂಸೆಗೆ ಪಾತ್ರವಾಯಿತು.