ಬೆಳ್ತಂಗಡಿ: ನಮ್ಮ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಜನುಮ ದಿನದ ಪ್ರಯುಕ್ತ ಚಾರ್ಮಾಡಿ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಇಲ್ಲಿಯ ಒಳ ರೋಗಿಗಳಿಗೆ ಹಣ್ಣು-ಹಂಪಲು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಆಗಿ ಸೇವೆಯನ್ನು ನೀಡಿದಂತಹ ಹಾಸ್ಪಿಟಲಿನ ದಾದಿಯರಿಗೆ ಹಣ್ಣು-ಹಂಪಲು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆ ವೈದ್ಯರಾದ ಡಾಕ್ಟರ್ ಮುರಳಿಕೃಷ್ಣ ಇರ್ವತ್ರಯ ವಂದನ ಇರ್ವತ್ರಯ ತಾಲೂಕು ಪಂಚಾಯಿತಿ ಸದಸ್ಯ ಕೊರಗಪ್ಪ ಗೌಡ ತಾಲೂಕು ಯುವ ಮೋರ್ಚಾ ಸದಸ್ಯ ದಿವಿನ್ ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಕಾಶ್ ಹೊಸಮಠ ಕೃಷ್ಣರಾವ್ ಕೆ ಗ್ರಾಮ ಪಂಚಾಯತ್ ಸದಸ್ಯರಾದ ರವಿ ಗುತ್ತಿಗೆ ತಾಲೂಕ್ ಗೊರಕ್ಷಕ್ ಪ್ರಮುಖ್ ದಿನೇಶ್ ಧನ್ಯ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅಶೋಕ್ ಜೈನ್ ಸಿ. ಎ ಬ್ಯಾಂಕಿನ ಮ್ಯಾನೇಜರ್ ಮಧುಕರ್ ರಾವ್ ಉಪಸ್ಥಿತರಿದ್ದರು.