ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಬಲವಂತದ ಸಾಲ ವಸೂಲಾತಿಯಿಂದಾಗಿ ಮಾನಸಿಕವಾಗಿ ನೊಂದ ಅನೇಕರು ಆತ್ಮಹತ್ಯೆಯಂತ ದಾರಿಯನ್ನು ಹಿಡಿಯುತ್ತಿದ್ದಾರೆ. ಈ ಮೀಡರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಹೊರಟಿರುವಂತ ರಾಜ್ಯ ಸರ್ಕಾರ, ಕಾಯ್ದೆಯ ತಿದ್ದುಪಡಿಗೂ ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ. ಒಂದು ವೇಳ ತಿದ್ದುಪಡಿಯಾಗಿ, ಜಾರಿಗೆ ಬಂದ್ರೆ, ಬಲವಂತವಾಗಿ ಸಾಲ ವಸೂಲಾತಿಗೆ ಬ್ರೇಕ್ ಬೀಳಲಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅದರಲ್ಲೂ ಮೀಟರ್ ಬಡ್ಡಿ ವಿಧಿಸಿ ಬಲವಂತದಿಂದ ಸಾಲ ವಸೂಲಿ ಮಾಡುವ ಲೇವಾದೇವಿದಾರರಿಗೆ ಬಿಸಿ ಮುಟ್ಟಿಸಲು ರಾಜ್ಯ ಸರ್ಕಾರ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ.
ಇದೇ ಕಾರಣಕ್ಕಾಗಿ ಸಾಲ ಕೊಟ್ಟಿ ಹೆಚ್ಚಿನ ಬಡ್ಡಿಗಾಗಿ ಕಿರುಕುಳ ನೀಡಿ, ಬಲವಂತವಾಗಿ ಸಾಲ ವಸೂಲಿ ಮಾಡುವುದನ್ನು ನಿಯಂತ್ರಿಸುವ ಸಂಬಂಧ ಕರ್ನಾಟಕ ಲೇವಾದೇವಿದಾರರ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ಇದರಿಂದಾಗಿ ಸಹಕಾರ ಇಲಾಖೆಯಲ್ಲಿ ಪ್ರಸ್ತು ಜಾರಿಯಲ್ಲಿರುವ ಮನಿ ಲಾಂಡರಿಂಗ್ ಕಾಯ್ದೆಯಲ್ಲಿನ ಕೆಲ ಅಂಶಗಳನ್ನು ತಿದ್ದುಪಡಿ ತರಲಿರುವಂತ ರಾಜ್ಯ ಸರ್ಕಾರವು, ಸಾಲ ಕೊಟ್ಟು ಹೆಚ್ಚಿನ ಬಡ್ಡಿಗಾಗಿ ಕಿರುಕುಳ ನೀಡಿ, ಬಲವಂತದಿಂದ ಸಾಲ ವಸೂಲಿ ಮಾಡೋದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.
ಈ ಕುರಿತಂತೆ ಮಾಹಿತಿ ನೀಡಿದಂತ ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ, ಕರ್ನಾಟಕ ಮನಿ ಲಾಂಡರಿಂಗ್ ಕಾಯ್ದೆ ಕಲಂ 38 ಮತ್ತು 39ಗಳಿಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಕಾಯ್ದೆ ತಿದ್ದುಪಡಿಯಾದ್ರೇ, ಒತ್ತಾಯಪೂರ್ವಕವಾಗಿ ಸಾಲ ಮತ್ತು ಬಡ್ಡಿ ವಸೂಲಿಗೆ 6 ತಿಂಗಳು ಶಿಕ್ಷೆ ವಿಧಿಸಲಾಗುತ್ತಿತ್ತು. ಅದನ್ನು 1 ವರ್ಷಕ್ಕೆ ಹೆಚ್ಚಿಸಲಾಗುತ್ತಿದೆ. 2ನೇ ಅಪರಾಧಕ್ಕೆ 2 ವರ್ಷ ಶಿಕ್ಷೆ ವಿಧಿಸಲಾಗುತ್ತದೆ. 5 ಸಾವಿರ ದಂಡವನ್ನು 50 ಸಾವಿರ ರೂಗಳಿಗೂ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.