ಹಿಂದೂ ಜನಜಾಗೃತಿ ಸಮಿತಿಯು ಕಳೆದ 14 ವರ್ಷಗಳಿಂದ ಹಿಂದೂಗಳಲ್ಲಿ ಹಿಂದೂ ರಾಷ್ಟ್ರದ ಬಗ್ಗೆ ಜನಜಾಗೃತಿ ಮೂಡಿಸಲು ಭಾರತದಾದ್ಯಂತ ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳನ್ನು ಆಯೋಜಿಸುತ್ತಿದೆ. ಈಗಾಗಲೇ ಭಾರತದಾದ್ಯಂತ 1500 ಸಭೆಗಳ ಮೂಲಕ 15 ಲಕ್ಷಕ್ಕೂ ಅಧಿಕ ಜನರಲ್ಲಿ ಹಿಂದೂ ರಾಷ್ಟ್ರದ ಬಗ್ಗೆ ಜನಜಾಗೃತಿ ಮೂಡಿಸಲಾಯಿತು.
ಈ ಸಭೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ದೇಶ ವಿರೋಧಿ, ಹಿಂದೂ ವಿರೋಧಿ ಷಡ್ಯಂತ್ರ, ಲವ್ ಜಿಹಾದ್, ಮತಾಂತರ, ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ, ಹಿಂದೂ ದೇವಸ್ಥಾನಗಳ ಸರಕಾರಿಕರಣ, ಹಿಂದೂ ದೇವತೆಗಳ ಅಪಮಾನ ಮುಂತಾದ ವಿಷಯಗಳ ಬಗ್ಗೆ ಹಿಂದೂಗಳಲ್ಲಿ ಜನಜಾಗೃತಿ ಮೂಡಿಸಲಾಗುವುದು. ಅದಲ್ಲದೇ ಇದನ್ನು ತಡೆಯಲು ಏನೆಲ್ಲ ಮಾರ್ಗೋಪಾಯಗಳನ್ನು ಮಾಡಬೇಕು ಉದಾಹರಣೆಗೆ ಹಿಂದೂ ಸಂಘಟನೆ, ಧರ್ಮ ಜಾಗೃತಿ, ಧರ್ಮ ಶಿಕ್ಷಣ ನೀಡುವುದು ಮುಂತಾದ ಉಪಾಯಯೋಜನೆಗಳೊಂದಿಗೆ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಹಿಂದೂ ಸಮಾಜಕ್ಕೆ ದಿಶೆಯನ್ನು ನೀಡಲಾಗುವುದು.
ಹಿಂದೂ ರಾಷ್ಟ್ರ ಜಾಗೃತಿ ಸಭೆಯ ವಕ್ತಾರರು :-
- ಪ್ರಮೋದ್ ಮುತಾಲಿಕ್, ರಾಷ್ಟ್ರೀಯ ಅಧ್ಯಕ್ಷರು, ಶ್ರೀರಾಮನ ಸೇನೆ.
2. ಪೂಜ್ಯ ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.
- ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
ಆನ್ಲೈನ್ ಹಿಂದೂ ರಾಷ್ಟ್ರ-ಜಾಗೃತಿ ಸಭೆಯ ವಿವರ
ದಿನಾಂಕ : 21 ಫೆಬ್ರವರಿ, 2021, ಭಾನುವಾರ ಸಂಜೆ 7.00 ಕ್ಕೆ
ಈ ಕಾರ್ಯಕ್ರಮವು http://Fb.com/HJSBengaluruಮತ್ತು http://Youtube.com/HJSKarnatakaಮೂಲಕ ಪ್ರಸಾರವಾಗಲಿದೆ.
ಸಮಸ್ತ ಹಿಂದೂ ಬಾಂಧವರು ಕುಟುಂಬ ಸಮೇತ ಉಪಸ್ಥಿತ ಇರಬೇಕು ಎಂದು ವಿನಂತಿ.