ಸ್ವದೇಶೀ ಉತ್ಪನಗಳ ಬಳಕೆಯಿಂದ ನಾವು ಆರೋಗ್ಯಕರವಾಗಿರಬಹುದು – ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿಂದು ಧನ್ವಿತ ಓಕೆ ಲೈಫ್ ಕೇರ್ ಮಳಿಗೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಧರ್ಮದರ್ಶಿಯವರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರವರು ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು ಸ್ವದೇಶೀ ಉತ್ಪನಗಳ ಬಳಕೆಯಿಂದ ನಾವು ಆರೋಗ್ಯಕರವಾಗಿರಬಹುದು ನಮ್ಮ ಅರೋಗ್ಯಕ್ಕೆ ಸ್ವದೇಶೀ ಉತ್ಪನ್ನಗಳ ಬಳಕೆ ತುಂಬಾ ಅಗತ್ಯ. ನಾವು ದಿನನಿತ್ಯ ಬಳಸುವ ವಸ್ತುಗಳು ಸ್ವದೇಶೀಯೇ ಆದ್ರೆ ಮುಂದಿನ 3 ವರ್ಷ ಗಳಲ್ಲಿ ಭಾರತ ವಿಶ್ವ ಗುರು ಅಗುದರಲ್ಲಿ ಸಂಶಯ ವಿಲ್ಲ ಎಂದು ಹೇಳಿದರು.

READ ALSO


ಮುಖ್ಯ ಅತಿಥಿ ಉದ್ಯಮಿ ಶ್ರೀ ರಾಮದಾಸ್ ಪೈಯವರು ಮಾತನಾಡಿ -ಸ್ವದೇಶೀ ಉತ್ಪನ್ನಗಳನ್ನು ಬಳಸೋಣ, ಉದ್ಯೋಗವಕಾಶ ವನ್ನು ಪಡೆಯೋಣ, ದೇಶದ ಆರ್ಥಿಕತೆಯನ್ನು ಬೆಳೆಸೋಣ ಎಂದರು.

ಪಿಲ್ಯದ ನಾಟಿ ವೈದ್ಯ ಬೇಬಿ ಪೂಜಾರಿ ಮಾತನಾಡಿ ನಾವು ಕೊಡುವ ನಾಟಿ ಔಷದಿ ಮತ್ತು ಓಕೆ ಲೈಫ್ ಕೇರ್ ನಲ್ಲಿ ಸಿಗುವ ವಸ್ತುಗಳು ಸಮವಾಗಿ ಇದೆ ಎಂದರು.
ಓಕೆ ಕೇರ್ ನ ರಾಷ್ಟ್ರೀಯ ತರಬೇತುದಾರ ಚಂದ್ರಹಾಸ ಶೆಟ್ಟಿ ಮಾತನಾಡಿ ಸಂಸ್ಥೆಯಲ್ಲಿ ಸಿಗುವ ಎಲ್ಲಾ ಉತ್ಪನ್ನ ಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆ ಮಾಲಕರಾದ ಉಮೇಶ್ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಂದ್ರಹಾಸ ಶೆಟ್ಟಿ ಸ್ವಾಗತಿಸಿ, ಉಮೇಶ್ ಬಂಗೇರ ಧನ್ಯವಾದ ನೀಡಿದರು. ಸತೀಶ್ ಬಂಗೇರ ಮತ್ತು ಶೈಲಜಾ ಸತೀಶ್ ನಿರೂಪಿಸಿದರು.