ನಗುವಿನ ನಂದನವನ, ಮಗು ಮನಸ್ಸಿನ ವಾಲ್ಟರ್ ನಂದಳಿಕೆ

250 ರುಪಾಯಿ ಕೊರ‍್ದು ಸಿನಿಮಾ ತೂಪಿನೆಡ್ದ್ ಮೊಬೈಲುಡೇ ಕಾಮೆಡಿ ತೂವೊಲಿ ಎಂದು ಒಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು, ನನಗೆ ಇದು ಹೌದು ಎಂದು ಅನಿಸಿದ್ದು ಮೊನ್ನೆ ವಾಲ್ಟರ್ ನಂದಳಿಕೆ ಅವರ ಪ್ರೆವೇಟ್ ಚಾಲೆಂಜ್ ನಲ್ಲಿ ಬಸ್ ಕಂಡಕ್ಟರ್ ಜತೆಗಿನ ಸಂದರ್ಶನ.

ನನ್ನ ಮೊಬೈಲ್ ನ ಸ್ಕ್ರೀನ್ ನಲ್ಲಿ ಆಗಾಗ ಬರುವ ನಂದಳಿಕೆ- ಬೋಳಾರ್ ಕಾಮಿಡಿ ಸೀರಿಯಲ್‌ಗಳನ್ನುನೋಡಿ ಖುಷಿ ಪಡುವುದುಂಟು.

ಮೊನ್ನೆಯಂತೂ ಬೋಳಾರ್ ಬಸ್ ಕಂಡಕ್ಟರ್ ಪಾತ್ರದಲ್ಲಿ ಕಾಮಿಡಿ ಜತೆ ವಾಸ್ತವವನ್ನು ಬಿಚ್ಚಿಡುವ ಕಾಮಿಡಿ.
ಅದಕ್ಕೆ ಪೂರಕವಾಗಿ ಸಂದರ್ಶಿಸುವ ವಾಲ್ಟರ್ ಅವರ ಮುಗ್ಧತೆಯ ಪ್ರಶ್ನೆಗಳು… ಈ ಜೋಡಿಯ ಮೋಡಿಯನ್ನು ಕಂಡಾಗ ಇದೊಂದು ವರ್ತ್ ಪ್ರೋಗ್ರಾಂ ( ಅಪರೂಪದ ಅಮೂಲ್ಯ ಕಾರ್ಯಕ್ರಮ) ಎಂದೆಣಿಸಿದ್ದು ಸುಳ್ಳಲ್ಲ.
ಒಂದು ಎಪಿಸೋಡ್ ಗೆಎಷ್ಟೊಂದು ಅಧ್ಯಯನ, ತಯಾರಿ?! ಅದನ್ನು ಕಾಮಿಡಿಗೆ ಪರಿವರ್ತಿಸುವ ಚಾಕಚಕ್ಯತೆ, ಎಲ್ಲೆ ಮೀರದ ಪ್ರಸ್ತುತಿ… ಎಲ್ಲವೂ ಒಂದಕ್ಕೊಂದು ಸರಿ ಮಿಗಿಲು.

ಎರಡು ದಶಕಗಳಿಂದ ನಾನು ವಾಲ್ಟರ್ ಅವರನ್ನು ಗಮನಿಸುತ್ತಿದ್ದೇನೆ. ಸರ್ವರ ಜತೆ ಸಮಭಾವ. ಪಕ್ಷಪಾತ ಧೋರಣೆ ಇಲ್ಲದೆ ಸಮಚಿತ್ತವಾಗಿರುವ ವಾಲ್ಟರ್ ನಿಗರ್ವಿ. ಒಂದೆರಡು ಬಾರಿ ವೈಯಕ್ತಿಕವಾಗಿ ಅಭಿನಂದಿಸಿರಬಹುದು. ಅವರು ಮಾಡಿದ ಸಾಧನೆಗೆ ಹಲವು ಬಾರಿ ಅಭಿನಂದಿಸಬೇಕಿತ್ರು. ಆದರೇನು ನಾವು ಹೇಳಿ ಕೇಳಿ ಪತ್ರಕರ್ತರು ನಮ್ಮ ಕಣ್ಣಿಗೆ ನಮ್ಮವರೇ ಆದ ಪತ್ರಕರ್ತರು ಬೀಳುವುದೇ ಇಲ್ಲ. ಬಿದ್ದರೂ ಬೇಕೆಂದೇ ಗಮನಿಸುವುದಿಲ್ಲ.

ಸಾಧನೆ ಮಾಡಿದರೂ “ಅವ್ ದಾದ ಮಲ್ಲ ಕುಂಬುಡನಾ” ಎಂದು ಉದ್ದೇಶಪೂರ್ವಕವಾಗಿ ಉಪೇಕ್ಷಿಸುವುದೇ ಹೆಚ್ಚು!.

ಆದರೆ ಈ ಬಾರಿ ಅವರ ಕಾಮಿಡಿ ಶೋ ನನ್ನ ಮನಸ್ಸನ್ನು ಎಷ್ಟು ಶುಭ್ರಗೊಳಿಸಿತು ಎಂದರೆ ಅಭಿನಂದಿಸಲೇ ಬೇಕು ಎಂದು ಹಠ ಹಿಡಿದು ಮೊದಲ ಬಾರಿಗೆ ತುಸು ದೀರ್ಘವಾಗಿಯೇ ಬರೆದು ಅಭಿನಂದಿಸಿದ್ದೇನೆ, (ಬಾಕಿ ಎಲ್ಲ ಸೇರಿಸಿ).

ಪಿಂಗಾರದ ರೇಮಂಡ್ ತಾಕೊಡೆ ಕಾರ್ಕಳದಲ್ಲಿ ಸಿಕ್ಕಾಗ ದಾಯ್ಜಿದುಬೈಯ ಕಾರ್ಕಳದ ವರದಿಗಾರ ಎಂದು 2002ರಲ್ಲಿ ಹೇಳಿದ ನೆನಪು. ಆಗ ಮೊದಲ ಬಾರಿ ವಾಲ್ಟರ್ ಅವರ ಹೆಸರು ಕೇಳಿದೆ. ನಾನಾಗ ಕಾರ್ಕಳದಲ್ಲಿ ವಿಜಯಕರ್ನಾಟಕ ವರದಿಗಾರನಾಗಿದ್ದೆ.

ದೂರದ ದುಬೈಯತ್ತ..

ಕರಾವಳಿಯ ಎಲ್ಲ ಹುಡುಗರಂತೆ ವಾಲ್ಟರ್ ಕೂಡಾ ಉದ್ಯೋಗ ನಿಮಿತ್ತ ದುಬೈಗೆ ಹೋಗಿದ್ದಾಗ “ನಾನು ವೆಬ್‌ಸೈಟ್ ಮಾಡ್ತಾ ಇದ್ದೇನೆ” ಎಂದು 2000ದಲ್ಲಿ ಗೆಳೆಯರಿಗೆ ಎಪ್ರಿಲ್ ಫೂಲ್ ಇಮೇಲ್ ಮಾಡಿದ್ರಂತೆ !
ಗೆಳೆಯರು ಸಹಜ ಎಂದು ವಿಚಾರಿಸತೊಡಗಿದಾಗ ನಿಜವಾಗಿಯೂ ವೆಬ್‌ಸೈಟ್ ಮಾಡುವ ಯೋಚನೆ ಬಂದು ಆ ಬಗ್ಗೆ ಅಧ್ಯಯನ ಮಾಡಿ ದಾಯ್ಜಿದುಬೈ ಮಾಡಿದರು.
ಬಳಿಕ “ದಾಯ್ಜಿವರ್ಲ್ಡ್ ವೆಬ್‌ಸೈಟ್” ಮೊತ್ತ ಮೊದಲ ಬಾರಿಗೆ ಲಕ್ಷ ಲಕ್ಷ ಹಿಟ್ಸ್ ಪಡೆದ ಕರಾವಳಿಯ ವೆಬ್‌ಸೈಟ್.
ಇದೊಂದು ಲಾಭದಾಯಕ ಉದ್ಯಮ ಎನ್ನುವುದನ್ನು ಕರಾವಳಿಯಲ್ಲಿ ಮಾತ್ರವಲ್ಲ ರಾಜ್ಯದಲ್ಲೂ ತೋರಿಸಿಕೊಟ್ಟಿತು.

ದಾಯ್ಜಿವರ್ಲ್ಡ್24×7 ವಾಹಿನಿಯಂತೂ ಕರಾವಳಿಯಲ್ಲಿ ಮನೆ ಮಾತು. ಲಾಕ್‌ಡೌನ್‌ನಲ್ಲಿ ಎಲ್ಲರೂ ಅಧಃಪತನದತ್ತ ಸಾಗುತ್ತಿದ್ದಾಗ ಫೀನಿಕ್ಸ್ ನಂತೆ ಮೇಲೆದ್ದು ಪ್ರತಿ ಸೋಲು- ಸಮಸ್ಯೆ ಒಂದು ಅವಕಾಶ ಎಂದು ಭಾವಿಸಿ, ಅದನ್ನು ಸವಾಲಿನಂತೆ ಸ್ವೀಕರಿಸಿ ಕೊರೋನ ಗೆಲ್ಲೋಣ ಎಂಬ ಕಾರ್ಯಕ್ರಮದ ಮೂಲಕ ಕರಾವಳಿ ಅಮೂಲ್ಯ ಪ್ರತಿಭೆಗಳನ್ನು ಟಿವಿಯ ಮುಂದೆ ತಂದು ಕರಾವಳಿಗರ ಮನ ತಣಿಸಿ, ಕರಾವಳಿಯಲ್ಲಿ ಮನೆ ಮಾತಾದರು.

ಕೊಂಕಣಿ- ತುಳು ಕಾರ್ಯಕ್ರಮ, ಧರ್ಮಗುರುಗಳ ಸಂದರ್ಶನ, ಯತಿ ಶ್ರೇಷ್ಠರು, ಪಬ್ಲಿಕ್ ಚಾಲೆಂಜ್ ಹೀಗೆ ಅನೇಕ ಜನ ಮೆಚ್ಚುವ ಕಾರ್ಯಕ್ರಮಗಳು.
ಅದರಲ್ಲೂ ಕಾಮಿಡಿ ಶೋ ಪ್ರೈವೇಟ್ ಚಾಲೆಂಜ್ ಜಾಲತಾಣಗಳಲ್ಲಿಯೂ ಮಿಲಿಯಗಟ್ಟಲೆ ವೀವ್ಸ್ ಪಡೆಯುತ್ತಿವೆ.

ಖುಷಿ ಎಂದರೆ ವಾಲ್ಟರ್ ಅವರ ಪಬ್ಲಿಕ್ ಚಾಲೆಂಜ್ ಸೀರೀಸ್ ನಲ್ಲಿ ಅವರ ಒತ್ತಾಯದ ಮೇರೆಗೆ 7 ವರ್ಷಗಳ ಹಿಂದೆ ನಾನು ಕನ್ನಡಪ್ರಭದಲ್ಲಿದ್ದಾಗ ಅತಿಥಿ ಆಂಕರ್ ಆಗಿ ಪದಾರ್ಪಣೆ ಮಾಡಿ ಒಂದು ಎಪಿಸೋಡ್ ಮಾಡಿರುವುದು ಮರೆಯಲಾಗದ ನೆನಪು.

ಸೇವೆ:
ಇವರ ಚಾರಿಟಿ ಸಂಸ್ಥೆ ದಾನಿಗಳ ಮತ್ತು ಫಲಾನುಭವಿಗಳ ಮಧ್ಯವರ್ತಿಯಾಗಿ ಇದುವರೆಗೆ 20 ಕೋಟಿ ರು. ಬಡ- ಜನ ಸಾಮಾನ್ಯರ ಸೇವೆಗೆ ಒದಗಿಸಿರುವುದು ಇವರ ಸೇವಾ ಮನೋಭಾವಕ್ಕೆ ಹಿಡಿದ ಕನ್ನಡಿ.

ಮಾನವೀಯ ವರದಿಗಳಿಗೆ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ರು. ನೆರವು ಬಂದಿರೋದನ್ನ ನಾನು ನೋಡಿದ್ದೇನೆ.

ನನ್ನ ಕಾರ್ಕಳ, I mean ನಮ್ಮ ಕಾರ್ಕಳದ ವಾಲ್ಟರ್ ನಂದಳಿಕೆ- ವಿಲ್ಮಾ ದಂಪತಿಗೆ ಮೂವರು ಮಕ್ಕಳು.

ಕರಾವಳಿ- ವಿಶ್ವ ಕೊಂಕಣಿ, ತುಳು, ಕನ್ನಡಿಗರ ಮನ ಗೆದ್ದಿರುವ ವಾಲ್ಟರ್ ನಂದಳಿಕೆ ಅವರಿಂದ ಸಮಾಜಕ್ಕೆ ಇನ್ನಷ್ಟು ಕೊಡುಗೆ ಬರಲಿ.

✍🏻 JITENDRA Kundeshwara
9945666324
kundeshwara@gmail.com

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 283 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 45 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 316 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 55 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 111 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 52 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ