TRENDING
Next
Prev

ಪರಿಚಿತರಿಂದಲೇ ನಡೆಯಿತು ಹತ್ಯೆಗೆ ಯತ್ನ! ಬೆಳ್ತಂಗಡಿ ತಾಲೂಕಿನ ನೆರಿಯಾದಲ್ಲಿ ನಡೆದ ಘಟನೆ

ನೆರಿಯ: ಬೆಳ್ತಂಗಡಿಯ ನೆರಿಯ ಕಾಡು ಎಂಬಲ್ಲಿ ವ್ಯಕ್ತಿಯೋರ್ವರಿಗೆ ದುಷ್ಕರ್ಮಿಗಳು ಚೂರಿಯಂದ ಇರಿದ ಘಟನೆ ನಡೆದಿದೆ.

READ ALSO

ನೆರಿಯ ಗ್ರಾಮದ ಮಾಥ್ಯೂ ಎನ್.ಟಿ ರವರು ತನ್ನ ಪುತ್ರ ಮಿಥುನ್ ರವರ ಜೊತೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಪರಿಚಿತರೇ ಆದ ಸೋಜೋ ಹಾಗೂ ಅವರ ತಮ್ಮ ಜೋಬಿನ್ ಎಂಬವರು ಮಿಥುನ್ ರವರನ್ನು ತಡೆದು ಅವ್ಯಾಚ್ಯ ಮಾತುಗಳಿಂದ ನಿಂದಿಸಿ ಚೂರಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ.

ಮ್ಯಾಥ್ಯೂ ರವರು ಇದನ್ನು ತಡೆಯಲು ಮುಂದಾದಾಗ ಅವರ ಎಡ ಕೆನ್ನೆಗೆ, ಎಡಕಿವಿಗೆ, ಎಡ ಕಿವಿಯ ಹಿಂಭಾಗ, ಎಡ ಕುತ್ತಿಗೆಗೆ ಮತ್ತು ಹೊಟ್ಟೆಗೆ ಚೂರಿಯಿಂದ ಇರಿತಕ್ಕೊಳಗಾಗಿದ್ದಾರೆ. ಇವರ ಬೊಬ್ಬೆ ಕೇಳಿ ಸ್ಥಳಕ್ಕೆ ಓಡಿಬಂದ ನೆರೆಮನೆಯ ಬಿನೀಶ್ ಅವರಿಗೂ ಆರೋಪಿಗಳು ಬೆದರಿಕೆಯೊಡ್ಡಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚೂರಿಯಿಂದ ತಿವಿತಕ್ಕೊಳಪಟ್ಟು ಗಂಭೀರ ಗಾಯಗೊಂಡ ಮ್ಯಾಥ್ಯೂರವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣದ ವಿಚಾರದಲ್ಲಿ ಈ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ.