ಜನಪರ ಕೆಲಸಗಳನ್ನು ಸಮಾಜದ ಎದುರು ಹಿಡಿಯುವ ಕನ್ನಡಿ ಪತ್ರಿಕೆ: ಶಿರಿಯಾರ ಜೆ.ಸಿ.ಐ ವತಿಯಿಂದ ಪತ್ರಕರ್ತ ಲಕ್ಷ್ಮೀಮಚ್ಚಿನರಿಗೆ ಸಮ್ಮಾನ


ಕುಂದಾಪುರ: ಜನಪರವಾದ ಕೆಲಸಗಳನ್ನು ಸಮಾಜದ ಎದುರು ಎತ್ತಿಹಿಡಿದು ಅದರ ಅಂಕುಡೊಂಕುಗಳನ್ನು ಸರಿಪಡಿಸುವುದೇ ಪತ್ರಿಕೆಗಳ ಕೆಲಸ ಎಂದು ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.

ಜೆಸಿಐ ಕುಂದಾಪುರ ಸಿಟಿ ವತಿಯಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಎಂಬ ಕಾರ್ಯಕ್ರಮದಡಿಯಲ್ಲಿ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ವಿವಿಧ ಸ್ತರಗಳಲ್ಲಿ ಇರುವ ಲೋಪದೋಷಗಳನ್ನು ಪತ್ತೆ ಹಚ್ಚಿ, ಒಳಿತುಗಳನ್ನು ಕಂಡುಹುಡುಕಿ ಇತರರಿಗೆ ತೋರಿಸುವ ಕನ್ನಡಿಯಂತಹ ಮಾಧ್ಯಮ ಪತ್ರಿಕೆ. ಅಂತಹ ಕೆಲಸವನ್ನು ಕುಂದಾಪುರದ ವಿವಿಧ ಪತ್ರಕರ್ತರು ನಡೆಸುತ್ತಿದ್ದಾರೆ ಎಂದರು.
ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಆಡಳಿತದವರಿಗೂ ಅನೇಕ ಬಾರಿ ಸಮಸ್ಯೆಗಳು ಗಮನಕ್ಕೆ ಬರುವುದಿಲ್ಲ. ಆದರೆ ಮಾಧ್ಯಮದವರಿಗೆ ನಾವೆಲ್ಲಿ ಎಡವುತ್ತಿದ್ದೇವೆ ಎನ್ನುವುದು ತಿಳಿಯುತ್ತದೆ. ಅಂತಹ ಎಚ್ಚರಿಸುವ ಕೆಲಸ ಮಾಧ್ಯಮಗಳಿಂದ ನಡೆಯುತ್ತಿದೆ ಎಂದರು.

READ ALSO

ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರನ್ನು ಜೆಸಿಐ ಸಿಟಿ ಕುಂದಾಪುರದ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಸಮ್ಮಾನಿಸಿದರು.

ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ವಿಜಯ್ ಭಂಡಾರಿ, ಜೆಡಿಎಸ್ ಮುಖಂಡ ಮನ್ಸೂರ್ ಇಬ್ರಾಹಿಂ, ಜೆಸಿಐ ವಲಯಾದಿಕಾರಿ ಪ್ರಶಾಂತ್ ಹವಾಲ್ದಾರ್ , ಜೆ ಸಿರೇಟ್ ಅಧ್ಯಕ್ಷೆ ಡಾ| ಸೋನಿ, ಪೂರ್ವ ಅಧ್ಯಕ್ಷ ರು ಹಾಗೂ ನ್ಯಾಯವಾದಿಗಳಾದ ರಾಘವೇಂದ್ರ ಚರಣ್ ನಾವಡ ,ಜಯಚಂದ್ರ ಶೆಟ್ಟಿ ,ಗಿರೀಶ್ ಹೆಬ್ಬಾರ್ ಸದಸ್ಯರಾದ ಅಭಿಲಾಷ್, ಉಪನ್ಯಾಸಕಿ ಸರೋಜಾ, ಕಾರ್ಯದರ್ಶಿ ಗುರುರಾಜ್ ಕೊತ್ವಾಲ್ ಇನ್ನಿತರರು ಉಪಸ್ಥಿತರಿದ್ದರು.