ಲಂಚದ ಹಣಕ್ಕಾಗಿ ಪೀಡಿಸುತಿದ್ದ ಸರ್ವೆಯರ್ ACB ಬಲೆಗೆ

ಮಂಗಳೂರು: ಮಂಗಳೂರಿನ ಜನರನ್ನು ಲಂಚದ ಹಣಕ್ಕಾಗಿ ಪೀಡಿಸುತ್ತಿದ್ದ ಮಂಗಳೂರು ನಗರ ಸರ್ವೇಯರ ( ಮಂಗಳೂರು ತಾಲೂಕಿನ ಪ್ರಭಾರ) ಗಂಗಾಧರ M ಇಂದು ಮಂಗಳೂರಿನ ACB ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಮಂಗಳೂರಿನ ನಗರದಲ್ಲಿ ಉದ್ಯಮಿಯೋರ್ವರು ತಮ್ಮ ಕಛೇರಿಯ ಪೀಠೋಪಕರಣ ಮಾಡಿಸಲು ತಮ್ಮ ಮನೆಯ ಆವರಣದಲ್ಲಿ ಇದ್ದ ಸಾಗುವಾನಿ ಮರವನ್ನು ಕಡಿಯಲು ಅರಣ್ಯ ಇಲಾಖೆಗೆ single purmit ಅನುಮತಿಗಾಗಿ ಕೋರಿಕೆ ಪತ್ರ ಸಲ್ಲಿಸಿದ್ದರು, ಮಂಗಳೂರು ನಗರದ ಅರಣ್ಯ ಇಲಾಖೆ ಈ ಪತ್ರವನ್ನು ಕಂದಾಯ ಇಲಾಖೆಗೆ ಕಳಿಸಿತ್ತು,
ಒಂದು ತಿಂಗಳು ಕಳೆದರೂ ಸ್ಥಳ ಪರಿಶೀಲನೆ ನಡೆಸಲು ಬಾರದ ಸರ್ವೇಯರ್ ಗಂಗಾಧರ್ ಸ್ಥಳ ಪರಿಶೀಲನೆ ನಡೆಸಲು 3000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು,
ಕಂದಾಯ ಇಲಾಖೆಗೆ ಕಟ್ಟಬೇಕಾದ 600 ರೂಪಾಯಿ ಜೊತೆಯಲ್ಲಿ ಈತನಿಗೆ 3000 ರೂಪಾಯಿ ಕೊಟ್ಟ ಉದ್ಯಮಿಗೆ ಇನ್ನೊಂದು ತಿಂಗಳು ಕಳೆದರೂ ಮರ ಇರುವ ಸ್ಥಳದ ನಕಾಶೆ ನೀಡಲು ಪುನಃ 30,000-00 ಡಿಮಾಂಡ್ ಇಟ್ಟಿದ್ದರು.

READ ALSO

ಇದರಿಂದ ಮನ ನೊಂದ ಉದ್ಯಮಿ ಮಂಗಳೂರಿನ NECF ಸದಸ್ಯರ ಗಮನಕ್ಕೆ ತಂದರು ನಂತರ ಈ ವಿಚಾರವನ್ನು ಮಂಗಳೂರಿನ ACB ಇನ್ಸ್ಪೆಕ್ಟರ್ ಶ್ಯಾಮಸುಂದರ್ ರವರ ಗಮನಕ್ಕೆ ತರಲಾಯಿತು, 3 ದಿನಗಳ ಮುಂಜಾಗ್ರತಾ ಕಾರ್ಯಾಚರಣೆ ಮಾಡಿ ಇಂದು ಮಂಗಳವಾರ 5-30 ರ ಹೊತ್ತಿಗೆ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಚೌಕಾಶಿ ಮಾಡೊ 20, 000-00 ರೂಪಾಯಿ ಲಂಚದ ಹಣ ತೆಗೆದು ಕೊಳ್ಳುವ ಸಮಯದಲ್ಲಿ ಸಾಕ್ಷಿ ಸಮೇತ ಸರ್ವೇಯರ್ ಗಂಗಾಧರ್ m ರವರನ್ನು ACB ತಂಡ ಬಂಧಿಸಿದೆ.

ಕಾರ್ಯಾಚರಣೆಯಲ್ಲಿ ACB DYSP ಪ್ರಕಾಶ್, ಇನ್ಸ್ಪೆಕ್ಟರ್ ಗಳಾದ ಶ್ಯಾಮಸುಂದರ್ ಮತ್ತು ಗುರುರಾಜ್, ಸಿಬಂಧಿಗಳಾದ- ಹರಿಪ್ರಸಾದ್, ರಾಧಾಕ್ರಷ್ಣ ಕೆ, ಗಂಗಣ್ಣ, ರಾಧಾಕೃಷ್ಣ, ಉಮೇಶ್, ಆದರ್ಶ, ರಾಕೇಶ್, ರಾಜೇಶ್, ಭರತ್, ಮೋಹನ್ ಸಾಲಿಯಾನ್ ಪಾಲ್ಗೊಂಡಿದ್ದರು,