ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ‘ಟ್ರಸ್ಟ್‌ ನ ಪದಗ್ರಹಣ ಸಮಾರಂಭ, ಅಂಬುಲೆನ್ಸ್ ಲೋಕಾರ್ಪಣೆ, ಅಶಕ್ತರಿಗೆ ನೆರವು ಮತ್ತು ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ‘ಟ್ರಸ್ಟ್‌ ನ ಪದಗ್ರಹಣ ಸಮಾರಂಭ, ಅಂಬುಲೆನ್ಸ್ ಲೋಕಾರ್ಪಣೆ, ಅಶಕ್ತರಿಗೆ ನೆರವು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮೆ. 25 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಸಂಭ್ರಮದಿಂದ ನಡೆಯಿತು.ಮಂಗಳೂರು ಕಾವೂರು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ರಾಜ್ಯದಲ್ಲಿ ಒಕ್ಕಲಿಗ ಸಮಾಜ ದೊಡ್ಡ ಸಮುದಾಯವಾಗಿದೆ ಸಮುದಾಯಸ್ವಾಭಿಮಾನ ಬೆಳೆಸಿಕೊಂಡು ವ್ಯಕ್ತಿಯ ಚಿಂತನೆ, ಸಮಾಜದ ಚಿಂತನೆ ಸಮಾಜಮುಖಿಯಾಗಿ ಚಿಂತಿಸಿ ಬದುಕನ್ನು ಕಾರ್ಯಕನ್ನು ರೂಪಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಡಿ.ಬಿ ಬಾಲಕೃಷ್ಣ ವಹಿಸಿದ್ದರು.ವೇದಿಕೆಯಲ್ಲಿ ಶೃಂಗೇರಿ ಶಾಸಕ, ನವೀಕರಿಸಬಹುದಾದ ಇಂಧನಗಳ ನಿಗಮ ಅಧ್ಯಕ್ಷ ಟಿ.ಡಿ ರಾಜೇಗೌಡ, ಮಾಜಿ ಸಚಿವ ಜೆ.ಗಂಗಾಧರ ಗೌಡ,ಮಾಜಿ ಶಾಸಕ ಸಂಜೀವ ಮಠಂದೂರು,ಶ್ರೀ ನಾಗನಾಥೇಶ್ವರ ಕ್ಷೇತ್ರ ಬೇಗೂರು ಇದರ ಧರ್ಮದರ್ಶಿ ನಾರಾಯಣ ಗೌಡ ಬೇಗೂರು, ಉಜಿರೆ ಒಕ್ಕಲಿಗ ಗೌಡರ ಮಹಿಳಾ ಸಂಘದ ಅಧ್ಯಕ್ಷ ಅಪರ್ಣಾ ಶಿವಕಾಂತ್ ಗೌಡ, ಯುವ ಉದ್ಯಮಿ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಕಡಬ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸ್ಥಾಪಾಕಾಧ್ಯಕ್ಷ ಸುರೇಶ್ ಗೌಡ ಬೈಲು,ಮಂಗಳೂರು ಯುವ ಘಟಕದ ಅಧ್ಯಕ್ಷ ಕಿರಣ್ ಕುಮಾರ್ ಬಡ್ಡೆಗುತ್ತು,ಬೆಳ್ತಂಗಡಿ ಸ್ವಾಮಿ ಪ್ರಸಾದ್ ಕನ್ ಸ್ಟ್ರಕ್ಷನ್ ನ ಕೆ.ಎಂ ನಾಗೇಶ್ ಕುಮಾರ್ ಗೌಡ, ಪುತ್ತೂರು ತಾಲೂಕು ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ರವಿ ಗೌಡ ಮುಂಗ್ಲಿ ಮನೆ,ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು,ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂಬುಲೆನ್ಸ್ ಅನ್ನು ಲೋಕಾರ್ಪಣೆ ಗೊಳಿಸಲಾಯಿತು ಆಂಬೂಲೆನ್ಸ್ ಕೊಡುಗೆ ನೀಡಿದ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ಅಶಕ್ತರಿಗೆ ನೆರವನ್ನು ನೀಡಲಾಯಿತು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು, ನಿವೃತ್ತ ಸೈನಿಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಗಾಯತ್ರಿ ಮತ್ತು ನವೀನ್ ಗೌಡ ಕಾರ್ಯಕ್ರಮ ನಿರೂಪಿಸಿದರು.ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಗೌರವಾಧ್ಯಕ್ಷರಾದ ರಂಜನ್ ಜಿ ಗೌಡ ಬೆಳ್ತಂಗಡಿ, ಕೆ.ವಿಜಯ ಗೌಡ ವೇಣೂರು, ಕಾರ್ಯಾಧ್ಯಕ್ಷರಾದ ಶ್ರೀನವಾಸ ಗೌಡ ಬೆಳಾಲು,ಕೆ.ಜಯಂತ್ ಗೌಡ ಗುರಿಪಳ್ಳ,ಕಾರ್ಯದರ್ಶಿ ಭರತ್‌ ಗೌಡ ಬಂಗಾಡಿ, ಕೋಶಾಧಿಕಾರಿ ಸೂರಜ್ ಗೌಡ ವಳಂಬ್ರ,ಸ್ಥಾಪಕ ಟ್ರಸ್ಟಿಗಳಾದ ನವೀನ್ ಗೌಡ ಬಿ.ಕೆ ನಿಡ್ಲೆ,ವಸಂತ ಗೌಡ ಮರಕಡ ಮಚ್ಚಿನ, ದಾಮೋದರ ಗೌಡ ಸುರುಳಿ ಹಾಗೂ ಇತರರು ಇದ್ದರು.

Spread the love
  • Related Posts

    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸರ್ಕಾರವು ರಾಜ್ಯದ ವಿವಿಧ ಭಾಗಗಳಲ್ಲಿ ನೂತನ 12 ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಸಾರ್ವಜನಿಕರ ಭದ್ರತೆ, ಅಪರಾಧ ನಿಯಂತ್ರಣ ಹಾಗೂ ಪೊಲೀಸ್ ಸೇವೆಗಳನ್ನು ಜನರಿಗೆ ಇನ್ನಷ್ಟು ಸಮೀಪಕ್ಕೆ ತಲುಪಿಸಲು ಈ ಕ್ರಮ…

    Spread the love

    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    ಮುಂಬೈ: ಐಸಿಸಿ ಟಿ–20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸಮಗ್ರ ಆಟದ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ…

    Spread the love

    You Missed

    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    • By admin
    • March 6, 2026
    • 8 views
    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    • By admin
    • March 5, 2026
    • 14 views
    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    • By admin
    • March 5, 2026
    • 39 views
    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    ಬೆಳ್ತಂಗಡಿ : ಕಡಿರುದ್ಯಾವರ ಅಕ್ರಮ ಮರಳು ಸಾಗಾಟಕ್ಕೆ ಯತ್ನ, ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

    • By admin
    • March 5, 2026
    • 52 views
    ಬೆಳ್ತಂಗಡಿ : ಕಡಿರುದ್ಯಾವರ ಅಕ್ರಮ ಮರಳು ಸಾಗಾಟಕ್ಕೆ ಯತ್ನ, ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ಲೋಕಾರ್ಪಣೆ, ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದು: ಡಾ.ಹೆಗ್ಗಡೆ

    • By admin
    • March 5, 2026
    • 23 views
    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ಲೋಕಾರ್ಪಣೆ,  ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದು: ಡಾ.ಹೆಗ್ಗಡೆ

    ರಾಜಸ್ಥಾನದಲ್ಲಿ ಅಖಿಲ ಭಾರತ ಮಟ್ಟದ ಬೈಠಕ್

    • By admin
    • March 5, 2026
    • 17 views
    ರಾಜಸ್ಥಾನದಲ್ಲಿ ಅಖಿಲ ಭಾರತ ಮಟ್ಟದ ಬೈಠಕ್