ಒಲಿಂಪಿಕ್ಸ್ ಯುನಿಪೈಡ್ ಪುಟ್ಬಾಲ್ ಪಂದ್ಯಾಟದಲ್ಲಿ ಮಂಗಳೂರು ಮೂಲದ ಲಿಖಿತ ಹರೀಶ್ ತಂಡಕ್ಕೆ ಒಲಿದ ಪದಕ

ಮಂಗಳೂರು: ಅಮೇರಿಕಾದ ಮಿಚಿಗನ್‌ನಲ್ಲಿ ಜುಲೈ 30 ರಿಂದ ಆಗಸ್ಟ್ 6 ರವರೆಗೆ ನಡೆದಿರುವ ಅಂತರರಾಷ್ಟ್ರೀಯ ಮಟ್ಟದ ಒಲಂಪಿಕ್ಸ್ ಯುನಿಫೈಡ್ ಫುಟ್ಬಾಲ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯದಿಂದ ಲಯನ್ಸ್ ವಿಶೇಷ ಶಾಲೆ ಸುರತ್ಕಲ್ ನ ವಿಶೇಷ ವಿದ್ಯಾರ್ಥಿಯಾದ ಲಿಖಿತ ಹರೀಶ್ ಮತ್ತು ಪಾರ್ಟ್ನರ್ ಬೆಳಗಾವಿಯ ಧನಶ್ರೀ ಸದಾನಂದ ಇವರು ಭಾರತ ತಂಡವನ್ನು ಪ್ರತಿನಿಧಿಸಿರುತ್ತಾರೆ.

ಅಮೇರಿಕಾದ ಅಂತರಾಷ್ಟ್ರೀಯ ಯುನಿಫೈಡ್ ಫುಟ್ಬಾಲ್ ಕ್ರೀಡೆಯಲ್ಲಿ ಅನೇಕ ದೇಶಗಳು ಭಾಗವಹಿಸಿದ್ದವು. ಇದರಲ್ಲಿ ಭಾರತ ತೃತೀಯ ಸ್ಥಾನವನ್ನು ತಮ್ಮದಾಗಿಸಿ ಕಂಚಿನ ಪದಕವನ್ನು ತಮ್ಮ ಮುಡಿಗೇರಿಸಿದ್ದಾರೆ ಎಂಬುದು ನಮ್ಮ ದೇಶದ ಹೆಮ್ಮೆಯ ವಿಷಯವಾಗಿದೆ.

READ ALSO