ನಾಸಿಕ್: ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಆಮ್ಲಜನಕದ ಕೊರತೆಯ ಮಧ್ಯೆ, ನಾಸಿಕ್ ನ ಜಾಕಿರ್ ಹುಸೇನ್ ಆಸ್ಪತ್ರೆಯಿಂದ ಆಮ್ಲಜನಕ ಟ್ಯಾಂಕ್ ಸೋರಿಕೆಯಾದ ಘಟನೆ ವರದಿಯಾಗಿದೆ.
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಅವರ ಪ್ರಕಾರ, ಸೋರಿಕೆಯ ನಡುವೆ ಸುಮಾರು 11 ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ.
‘ನಾಸಿಕ್ನಲ್ಲಿ ವೆಂಟಿಲೇಟರ್ಗಳಲ್ಲಿದ್ದ ಕೋವಿಡ್-19 ರೋಗಿಗಳು ಆಮ್ಲಜನಕದ ಲಭ್ಯತೆಯ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ’ ಎಂದು ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದರು.
ಆಸ್ಪತ್ರೆಯ ಹೊರಗೆ ಆಮ್ಲಜನಕ ಟ್ಯಾಂಕ್ ಸೋರಿಕೆಯಾದ ಕಾರಣ ಆ ಪ್ರದೇಶದಾದ್ಯಂತ ಅನಿಲ ಸ್ಫೋಟಗೊಂಡಿತು. ಹಾಗೆಯೇ, ಸೋರಿಕೆಯನ್ನು ತಪ್ಪಿಸಲು ಅಗ್ನಿಶಾಮಕ ದಳದ ತಂಡದವರು ಧಾವಿಸಿದರು.
ಜಾಕೀರ್ ಹುಸೇನ್ ಆಸ್ಪತ್ರೆಯನ್ನು ನಾಸಿಕ್ ಮುನ್ಸಿಪಲ್ ಕಾರ್ಪೋರೇಶನ್ ನಡೆಸುತ್ತಿದೆ. ವರದಿಗಳ ಪ್ರಕಾರ, ಆಸ್ಪತ್ರೆಗೆ ದಾಖಲಾದ ಸುಮಾರು 171 ಕೋವಿಡ್-19 ರೋಗಿಗಳು ಆಮ್ಲಜನಕದ ಬೆಂಬಲದಲ್ಲಿದ್ದರೆ 67 ಮಂದಿ ಗಂಭೀರವಾಗಿದ್ದಾರೆ.