Bengaluru: ಬೆಂಗಳೂರಿನಲ್ಲಿ ಭೀಕರ ಪಟಾಕಿ ದುರಂತ ಸಂಭವಿಸಿದೆ ಪಟಾಕಿಗಳ ದೊಡ್ಡ ಸ್ಟಾಕ್ ಗೆ ಬೆಂಕಿ ತಗುಲಿ ಭಾರಿ ಪ್ರಮಾಣದ ಸ್ಪೋಟ ಸಂಭವಿಸಿ 13 ಮಂದಿ ಸಜೀವ ದಹನವಾಗಿರುವ ಘಟನೆ ವರದಿಯಾಗಿದೆ. ಲಾರಿಯಲ್ಲಿ ಪಟಾಕಿ ಅಪ್ಲೋಡ್ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿ ಪಟಾಕಿ ಅಂಗಡಿ ಹೊತ್ತಿ ಉರಿದ ಪರಿಣಾಮ 12 ಜನರು ಸಜೀವ ದಹನವಾಗಿರುವಂತಹ ಘಟನೆ ಇದಾಗಿದೆ. ದುರಂತಕ್ಕೆ ಈಡಾದ ಪಟಾಕಿ ಅಂಗಡಿಯಲ್ಲಿ 20 ಮಂದಿಗೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದರು. ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ.
ಬೆಂಗಳೂರು ನಗರದ ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಶನಿವಾರ ಈ ಭೀಕರ ದುರಂತ ಸಂಭವಿಸಿದೆ. ನವೀನ್ ಎಂಬುವರಿಗೆ ಸೇರಿದ ಪಟಾಕಿ ಮಳಿಗೆಯಲ್ಲಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.ಘಟನೆಯಲ್ಲಿ ಒಂದು ಕ್ಯಾಂಟರ್, 2 ಬೊಲೆರೋ, 4 ಬೈಕ್ಗಳು ಸೇರಿದಂತೆ ಕೋಟ್ಯಂತರ ರೂಪಾಯಿಗಳ ಪಟಾಕಿ ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ ಪಟಾಕಿ ಅಂಗಡಿ ಮಾಲೀಕ ನವೀನ್ ಅನ್ನು ಅವರಿಗೆ ಕೂಡ ಸುಟ್ಟ ಗಾಯಗಳಾಗಿವೆ. ಪ್ರತ್ಯಕ್ಷ ಅಧ್ಯಯನ ಪ್ರಕಾರ ಪಕ್ಕದ ತೋಟದವರು ಪೇಪರಿಗೆ ಹಕ್ಕಿದ ಬೆಂಕಿ ಪಟಾಕಿ ಅಂಗಡಿಗೆ ವ್ಯಾಪಿಸಿ ಅಲ್ಲಿಂದ ಸ್ಪೋಟ ಸಂಭವಿಸಿದೆ. ಪಟಾಕಿ ಅಂಗಡಿಯ ಸುತ್ತಮುತ್ತ ನಾಲ್ಕು ಅಂಗಡಿಗಳು ಅತ್ತಿಬೆಲೆಯಿಂದ ಚಂದಾಪುರದವರೆಗೆ ಟ್ರಾಫಿಕ್ ಜಾಮ್ ಆಗಿ ಆತಂಕ ಸೃಷ್ಟಿಯಾಗಿತ್ತು.