ಶಿಡ್ಲಘಟ್ಟ: ಇದೀಗ ಪ್ರಸ್ತುತ ಹೆಚ್ಚಾಗುತ್ತಿರುವ ವಾಯುಮಾಲಿನ್ಯವನ್ನು ತಡೆಯಲು ಸಸಿಗಳನ್ನು ನೆಡುವುದು ಅತ್ಯವಶ್ಯಕವಾಗಿದೆ ಎಂದು ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ತಿಳಿಸಿದರು.
ಸಾದಲಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಮಾಹಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭ ಮಾತನಾಡಿದ ಅವರು ಈ ಕರೋನಾ ಎಂಬ ಮಹಾಮಾರಿ ದೊಡ್ಡ ಕಾಯಿಲೆಗೆ ಎಷ್ಟು ಮಂದಿ ಆಕ್ಸಿಜನ್ ಅಂದರೆ ಗಾಳಿ ಸಿಗದೆ ಮರಣ ಹೊಂದುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಸೇರಿಕೊಂಡು ಗಿಡಗಳನ್ನು ನೆಟ್ಟು ಪರಿಸರವನ್ನು ಬೆಳೆಸಿ ಉಳಿಸುವ ಕಾರ್ಯಕ್ರಮವನ್ನು ಮಾಡಬೇಕಾಗಿದೆ ಪ್ರತಿಯೊಬ್ಬ ಜನರು ತನ್ನ ಹುಟ್ಟಿದ ದಿನವನ್ನು ಒಂದು ಸಸಿ ನೆಡುವ ಮೂಲಕ ಆಚರಿಸಿಕೊಂಡರೆ ನೆನಪಾಗಿ ಉಳಿಯುತ್ತದೆ ಎಂದು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷರಾದ ಆಂಜನಪ್ಪ ಮಾತನಾಡಿ ಪ್ರತಿವರ್ಷ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಗಿಡಗಳನ್ನು ನಾಟಿ ಮಾಡುವ ಮೂಲಕ ಅವುಗಳನ್ನು ಪೋಷಣೆ ಮಾಡಲಾಗುತ್ತಿದ್ದು ಅದೇ ರೀತಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ ಮೂರ್ತಿ. ಶಾಲೆಯ ಶಿಕ್ಷಕ ಶ್ರೀನಿವಾಸ್. ಸಂಸ್ಥೆಯ ಮೇಲ್ವಿಚಾರಕ ದಯಾನಂದ್. ಸೇವಾ ಪ್ರತಿನಿಧಿ ಮಂಜುನಾಥ್. ಆದಿನಾರಾಯಣ ಶೆಟ್ಟಿ. ಅನಿತಾ. ಊರಿನ ಗ್ರಾಮಸ್ಥರು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು