ಟೆಲಿಕಾಂ ಚಂದಾದಾರರು ಪ್ರಿಪೇಯ್ಡ್ ಸಂಪರ್ಕದ ನಡುವೆ ಕೇವಲ ಒಟಿಪಿ ಮೂಲಕ ಪೋಸ್ಟ್‌ಪೇಯ್ಡ್ ಗೆ ಬದಲಾವಣೆಗೆ ಅವಕಾಶ

ನವದೆಹಲಿ : ಭಾರತದಲ್ಲಿನ ಟೆಲಿಕಾಂ ಚಂದಾದಾರರು ಶೀಘ್ರದಲ್ಲೇ ಪ್ರಿಪೇಯ್ಡ್ ಸಂಪರ್ಕದ ನಡುವೆ ಕೇವಲ ಒಟಿಪಿ ಮೂಲಕ ಪೋಸ್ಟ್‌ಪೇಯ್ಡ್ ಸಂಪರ್ಕಕ್ಕೆ ಬದಲಾಯಿಸಲು ಸಾಧ್ಯವಾಗುತ್ತದೆ. ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್ ಸಂಪರ್ಕಕ್ಕೆ ಬದಲಾಯಿಸುವ ಹಳೆಯ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪರಿಷ್ಕರಿಸಲಾಗುವುದು ತಿಳಿದು ಬಂದಿದೆ.

ಇದೀಗ, ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾಯಿಸಲು ಗ್ರಾಹಕರು ಮತ್ತೆ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ, ಆದಾಗ್ಯೂ, ಇದು ಭವಿಷ್ಯದಲ್ಲಿ ಇರೋದಿಲ್ಲ ಎನ್ನಲಾಗಿದೆ. ಪರಿಷ್ಕೃತ ಪ್ರಕ್ರಿಯೆಯ ಮಾರ್ಗಸೂಚಿಗಳನ್ನು ಎರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿಎನ್‌ಬಿಸಿ ಮಾಡಿದ ಟ್ವೀಟ್‌ನಲ್ಲಿ ತಿಳಿಸಲಾಗಿದೆ. ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಹಿಂತಿರುಗುವುದು ಸಹ ಭಾರತದಲ್ಲಿ ಇದೀಗ ತೊಡಕಿನ ಪ್ರಕ್ರಿಯೆಯಾಗಿದ್ದು ಈ ನಿಟ್ಟಿನಲ್ಲಿ ಈಗ ಇದು ಸಹಾಯವಾಗಲಿದೆ.

READ ALSO