ಪ.ರಾಮಕೃಷ್ಣಶಾಸ್ತ್ರಿಯವರಿಗೆ ಮಕ್ಕಳ ಸಾಹಿತ್ಯ ಕ್ಷೇತ್ರ’ ಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಬಾಲ ಸಾಹಿತ್ಯ ಅಕಾಡಮಿ ಗೌರವ ಪುರಸ್ಕಾರ

ಬೆಳಗಾವಿ: ಪ.ರಾಮಕೃಷ್ಣಶಾಸ್ತ್ರಿ ಇವರು ‘ಮಕ್ಕಳ ಸಾಹಿತ್ಯ ಕ್ಷೇತ್ರ’ ಕ್ಕೆ ಸಲ್ಲಿಸಿದ ಅನುಪಮ ಸೇವೆ-ಸಾಧನೆಯನ್ನು ಗಮನಿಸಿ ಬೆಳಗಾವಿ ಯ ಸುವರ್ಣ ಸೌಧ ದಲ್ಲಿ ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾ ಳ್ಕರ್ ರವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಖಾಂತರ ನೀಡಲಾಗುವ 2023-24 ನೇ ಸಾಲಿನ ಬಾಲ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದರು

ಪ. ರಾಮಕೃಷ್ಣಶಾಸ್ತ್ರಿ ಅವರು 1964ರಿಂದ ತಮ್ಮ 11ನೇ ವಯಸ್ಸಿನಿಂದ ಬರವಣಿಗೆಯಲ್ಲಿ ತೊಡಗಿಕೊಂಡವರು. ಕರ್ನಾಟಕದ ಬಹುತೇಕ ಪತ್ರಿಕೆಗಳಲ್ಲಿ ಸುಮಾರು 12,000ಕ್ಕಿಂತ ಅಧಿಕ ಲೇಖನ ಬರಹಗಳು ಪ್ರಕಟನೆಗೊಂಡಿರುತ್ತವೆ. ಮಹಾರಾಷ್ಟ್ರದ ಕನ್ನಡ ಶಾಲೆಗಳ 5. 6 ಮತ್ತು 7ನೇ ತರಗತಿ, ಕೇರಳದ ಎಂಟನೆಯ ತರಗತಿ ಹಾಗೂ ಮಂಗಳೂರು ವಿವಿ ಪಠ್ಯದಲ್ಲಿ ಇವರ ಕನ್ನಡ ಮತ್ತು ತುಳು ಕತೆಗಳು ಪಾಠವಾಗಿವೆ. ಮಕ್ಕಳಿಗಾಗಿ ೫೨ ಕಥಾ ಸಂಕಲನ, ಸಾಮಾಜಿಕ ಕಥಾ ಸಂಕಲನ, ಹಾಸ್ಯ ಲೇಖನ ಸಂಗ್ರಹ, ಜೀವನ ಚರಿತ್ರೆ, ವಯಸ್ಕರ ಶಿಕ್ಷಣಕ್ಕಾಗಿ ಪುಸ್ತಕಗಳು, ಮಹಿಳೆಯರಿಗಾಗಿ ಕೈಪಿಡಿ, ತುಳುವಿನಲ್ಲಿ ಪಣಿಯಾಡಿ ಪ್ರಶಸ್ತಿ ಪಡೆದ ಕಾದಂಬರಿ, ಕನ್ನಡ ಕಾದಂಬರಿ, ಗ್ರಾಮಾಭಿವೃದ್ಧಿ ಯೋಜನೆಗಾಗಿ ಕೈಪಿಡಿ, ಮಕ್ಕಳಿಗಾಗಿ ಭಾಗವತ, ವಿಜ್ಞಾನ ಪುಸ್ತಕ, ವೈಚಾರಿಕ ಲೇಖನಗಳ ಪುಸ್ತಕ ಸೇರಿದಂತೆ ಒಟ್ಟು 1೧೩ ಪುಸ್ತಕಗಳು ಪ್ರಕಟವಾಗಿದೆ. ಸಂಪಾದಿತ ಕೃತಿ, ಸ್ಮರಣ ಸಂಚಿಕೆ ಸಂಪಾದನೆ ಇತ್ಯಾದಿಗಳು ಇವೆ. ವಿವಿಧ ಭಾಷೆಗಳಿಗೆ ಬರಹಗಳು ಅನುವಾದಗೊಂಡಿವೆ. ಆಕಾಶವಾಣಿ, ದೂರದರ್ಶನಗಳಲ್ಲೂ ಪ್ರಸಾರವಾಗಿದೆ. ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ವಿವಿಧ ಗೋಷ್ಠಿಗಳ ಅಧ್ಯಕ್ಷತೆ, ತಾಲೂಕು ಚುಟುಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ ಸಾಹಿತ್ಯ ಸೇವಕ, ಯಕ್ಷಗಾನ ಅರ್ಥಧಾರಿ, ಗಮಕ ವ್ಯಾಖ್ಯಾನಕಾರರಾಗಿರುವ ರಾಮಕೃಷ್ಣಶಾಸ್ತಿ ಇವರಿಗೆ ಕೇಂದ್ರ ಸರಕಾರದ ಪರಿಸರ ಇಲಾಖೆಯ ಪ್ರಶಸ್ತಿ, ತುಳುಶ್ರೀ ಪ್ರಶಸ್ತಿ, ಅಖಿಲ ಕರ್ನಾಟಕ ಮಕ್ಕಳ ಮೇಳದ ಗೌರವ, ಪಣಿಯಾಡಿ ಪ್ರಶಸ್ತಿ, ತುಳು ಅಕಾಡೆಮಿ, ತಾಲೂಕು ರಾಜ್ಯೋತ್ಸವ ಸಮಿತಿ, ಲಯನ್ಸ್, ರೋಟರಿ ಸಮ್ಮಾನ, ಆಶಾ ಸಾಲಿಯಾನ್ ಪ್ರತಿಷ್ಠಾನ ಗೌರವ, ಮಕ್ಕಳ ಸಾಹಿತ್ಯ ಸಂಗಮ, ಸಾಹಿತ್ಯ ಪರಿಷತ್ತಿನ ಮಸ್ತಕ ಪ್ರಶಸ್ತಿಗಳು, ಕಿನ್ನಿಗೋಳಿ ಕೊ. ಆ. ಉಡುಪ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದಿಂದ ಶಿವರಾಮ ಕಾರಂತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಸಂದಿವೆ.

Spread the love
  • Related Posts

    ಮೆದುಳು ಜ್ವರದಿಂದ ಕಿಲ್ಲೂರಿನ ಯುವಕ ನಿಧನ

    ಬೆಳ್ತಂಗಡಿ : ಮಲವಂತಿಗೆ ಗ್ರಾಮದ ಕಿಲ್ಲೂರು,ರಾಗಿಕುಮೇರ್ ಮನೆ ನಿವಾಸಿ ಕೊರಗಪ್ಪ ಮತ್ತು ಲಲಿತಾ ದಂಪತಿಗಳ ಮೊದಲ ಪುತ್ರ ಶಶಿರಾಜ್ ಪೂಜಾರಿ (34) ಅವರು ಮೆದುಳು ಜ್ವರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಏ.12ರಂದು ಬೆಳಗ್ಗಿನ ಜಾವ ನಿಧನರಾದರು. ಕಳೆದ ಕೆಲ ದಿನಗಳಿಂದ ತಲೆನೋವು…

    Spread the love

    ಎಕ್ಸೆಲ್ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಸರಸ್ವತಿ ಗೋ ಮಂದಿರ ಲೋಕಾರ್ಪಣೆ

    ಬೆಳ್ತಂಗಡಿ: ಹಲವು ಶೈಕ್ಷಣಿಕ ದಾಖಲೆಗಳ ಮೂಲಕ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆವರಣ ಇಂದು ಹೊಸ ವಿಷಯಕ್ಕೆ ಗಮನ ಸೆಳೆಯಿತು. ಏಪ್ರಿಲ್ 10 ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರ…

    Spread the love

    You Missed

    ಮೆದುಳು ಜ್ವರದಿಂದ ಕಿಲ್ಲೂರಿನ ಯುವಕ ನಿಧನ

    • By admin
    • April 12, 2026
    • 13 views
    ಮೆದುಳು ಜ್ವರದಿಂದ ಕಿಲ್ಲೂರಿನ ಯುವಕ ನಿಧನ

    ಎಕ್ಸೆಲ್ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಸರಸ್ವತಿ ಗೋ ಮಂದಿರ ಲೋಕಾರ್ಪಣೆ

    • By admin
    • April 10, 2026
    • 26 views
    ಎಕ್ಸೆಲ್ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಸರಸ್ವತಿ ಗೋ ಮಂದಿರ ಲೋಕಾರ್ಪಣೆ

    ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ವಿಶೇಷ ಯೋಜನೆಗಳ ಬೇಡಿಕೆ & ಬೆನ್ನುಹುರಿ ಸಂತ್ರಸ್ತರ ಕಲ್ಯಾಣಕ್ಕಾಗಿ ಸೇವಾಭಾರತಿ ಕನ್ಯಾಡಿಯ ವತಿಯಿಂದ ಮನವಿ

    • By admin
    • April 10, 2026
    • 7 views
    ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ವಿಶೇಷ ಯೋಜನೆಗಳ ಬೇಡಿಕೆ & ಬೆನ್ನುಹುರಿ ಸಂತ್ರಸ್ತರ ಕಲ್ಯಾಣಕ್ಕಾಗಿ ಸೇವಾಭಾರತಿ ಕನ್ಯಾಡಿಯ ವತಿಯಿಂದ ಮನವಿ

    ಎಕ್ಸೆಲ್ ಪಿಯು ಕಾಲೇಜು ದ್ವಿತೀಯ ಪಿಯುಸಿ ವಿಜ್ಞಾನ & ವಾಣಿಜ್ಯ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ

    • By admin
    • April 9, 2026
    • 27 views
    ಎಕ್ಸೆಲ್ ಪಿಯು ಕಾಲೇಜು ದ್ವಿತೀಯ ಪಿಯುಸಿ ವಿಜ್ಞಾನ & ವಾಣಿಜ್ಯ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ

    ಇಂದು PU ಫಲಿತಾಂಶ ಪ್ರಕಟ – ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕ ಪಡೆಯುವ ಅವಕಾಶ

    • By admin
    • April 9, 2026
    • 35 views
    ಇಂದು PU ಫಲಿತಾಂಶ ಪ್ರಕಟ – ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕ ಪಡೆಯುವ ಅವಕಾಶ

    ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ MOU: ಕರ್ನಾಟಕ ಸರ್ಕಾರದ ಹೊಸ ಮಾರ್ಗಸೂಚಿ

    • By admin
    • April 7, 2026
    • 90 views
    ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ MOU: ಕರ್ನಾಟಕ ಸರ್ಕಾರದ ಹೊಸ ಮಾರ್ಗಸೂಚಿ