ಬೆಳ್ತಂಗಡಿ: ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ಸಿಬಂಧಿಗಳ ಶ್ರಮ ಗೌಣವಾಗಿಸುತ್ತಿರುವ ಅಮಾನವೀಯ ಘಟನೆ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯಿಂದ ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ನಾವುರು ಮೂಲದ ಬಾಣಂತಿ ಮಹಿಳೆಯೊಬ್ಬರಿಗೆ ಕೊರೋನಾ ದೃಢವಾಗುತ್ತಿದ್ದಂತೆ ಆಕೆಯನ್ನು ಆಸ್ಪತ್ರೆಯಿಂದ ಬಲವಂತವಾಗಿ ಕರೆದೊಯ್ದ ಘಟನೆ ಬೆಳ್ತಂಗಡಿಯ ತಾಲೂಕು ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ .
ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ನಿನ್ನೆ ಇಬ್ಬರು ಗರ್ಭಿಣಿ ಮಹಿಳೆಯರು ಮಗುವಿಗೆ ಜನ್ಮ ನೀಡಿದ್ದು, ಕೋವಿಡ್ ತಪಾಸಣೆ ಹಿನ್ನಲೆಯಲ್ಲಿ ಅವರ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು.
ಇಂದು ಸಂಜೆ ಇಬ್ಬರು ಬಾಣಂತಿಯರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈ ವಿಚಾರ ಆಸ್ಪತ್ರೆಯ ನರ್ಸ್ ಮಹಿಳೆಯರಿಬ್ಬರಿಗೆ ತಿಳಿಸಿದ್ದಾರೆ. ಈ ವಿಚಾರವನ್ನು ಮಹಿಳೆ ಮನೆಯವರಿಗೂ ತಿಳಿಸಿದ್ದು ಮನೆಯ ಸದಸ್ಯರು ಇಂದು ರಾತ್ರಿ 9:30 ರ ಸಮಾರಿಗೆ ಮಾರುತಿ 800 ಕಾರಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬಂದು ಗೇಟಿನ ಬೀಗ ಮುರಿದು ಮಹಿಳೆ ಮತ್ತು ಮಗುವನ್ನು ಕಾರಿನಲ್ಲಿ ಕೂರಿಸಿ ಕರೆದೊಯ್ಯಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.