ಪುತ್ತೂರಿನ ಪ್ರತಿಷ್ಠಿತ ಪಾರ್ಮ್ ಹೌಸ್‌ವೊಂದರಲ್ಲಿ ಜಾರ್ಖಾಂಡ್ ಮೂಲದ ಯುವತಿಯ ಅತ್ಯಾಚಾರ!

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಪಾರ್ಮ್ ಹೌಸ್‌ವೊಂದರಲ್ಲಿ ಸ್ನೇಹಿತರೊಬ್ಬರ ಬೀಳ್ಕೊಡುಗೆ ಪಾರ್ಟಿಯ ಬಳಿಕ ಯುವತಿಯ ಮೇಲೆ ಬಲತ್ಕಾರ ನಡೆದ ಕುರಿತು ನೊಂದ ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

ಘಟನೆಯು ಫೆ. 6ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

READ ALSO

ಜಾರ್ಖಾಂಡ್ ಮೂಲದ ‌ನೊಂದ ಯುವತಿ ಮಂಗಳೂರಿನ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿದ್ದು ಸ್ನೇಹಿತರೊಬ್ಬರ ವರ್ಗಾವಣೆಗೆ ಸಂಬಂಧಿಸಿದಂತೆ ಪುತ್ತೂರಿನ ಪಾರ್ಮ್ ಹೌಸ್‌ಗೆ ಪಾರ್ಟಿಗೆಂದು ಬಂದ ವೇಳೆ ಸ್ನೇಹಿತರ ಜೊತೆಗಿದ್ದ ವ್ಯಕ್ತಿಯೊಬ್ಬರು ಆಕೆಯ ಮೇಲೆ ಬಲಾತ್ಕಾರ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಈ ಕುರಿತು ನೊಂದ ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು ಯುವಕ ಬ್ರಾಯನ್ ರಿಚರ್ಡ್ ಅಮನ್ನಾ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದು, ಈ ಕುರಿತಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.