ಪುತ್ತೂರು: ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಯಾವುದೇ ಮನವಿಯ ಮೇರೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ದೇವಸ್ಥಾನ, ದೈವಸ್ಥಾನ ಹಾಗೂ ಸಂಘ ಸಂಸ್ಥೆಗಳನ್ನು ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡರು RTC ಕಾಲಂ 11ರಲ್ಲಿ ಸೇರಿಸಿ ಸಕ್ರಮ ಗೊಳಿಸುವಂತೆ ಆದೇಶ ನೀಡಿದ್ದಾರೆ. ಈ ಕೆಳಗಿನ ದೇವಸ್ಥಾನ, ದೈವಸ್ಥಾನ ಹಾಗೂ ಸಂಘ ಸಂಸ್ಥೆಗಳು ಅತೀ ಶೀಘ್ರದಲ್ಲಿ ಸಕ್ರಮಗೊಳ್ಳಲಿದೆ.
1)ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್ (ರಿ) ದುರ್ಗಾಪರಮೇಶ್ವರಿ ಭಜನಾ ಮಂದಿರ, ಪೆರಿಯಡ್ಕ, ಉಪ್ಪಿನಂಗಡಿ.
2) ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ, ಶಾಂತಿಗೋಡು.
3) ಶ್ರೀ ಮಾರಿಯಮ್ಮ ಮತ್ತು ಸಪರಿವಾರ ದೈವಗಳ ದೇವಸ್ಥಾನ, ನೆಟ್ಟಣಿಗೆ ಮಡ್ನೂರು.
4) ಶ್ರೀ ಮಾರಿಯಮ್ಮ ದೇವಸ್ಥಾನ, ವಜ್ರಮೂಲೆ ಮೇನಾಲ.
5) ಮಾತೃಭೂಮಿ ಯುವವೇದಿಕೆ, ಮಾಣಿಲ.
6) ಸಾರ್ಯ ಹಾಲು ಉತ್ಪಾದಕರ ಮಹಿಳಾ ಸಂಘ.
7) ನಲಿಕೆಯವರ ಸಮಾಜ ಸೇವಾ ಸಂಘ, ಕಬಕ.
8) ಶ್ರೀ ಶಾರದಾಂಬ ಭಜನಾ ಮಂಡಳಿ, ಇಡ್ಕಿದು.
9)ಆದಿ ನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ, ತೆಂಕಿಲ.





