ಭಾರಿ ವರ್ಷಧಾರೆ ಗಾಳಿ ಮಳೆಗೆ ಧರೆಗುರುಳಿದ ಕೋಳಿ ಫಾರಂ ಕಟ್ಟಡ! ಲಕ್ಷಾಂತರ ರೂಪಾಯಿ ನಷ್ಟ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾವ್ಯ ಗ್ರಾಮದ ಬೀಜದಡಿ ಎಂಬಲ್ಲಿ ಸೋಮವಾರ ಗಾಳಿ- ಮಳೆಗೆ ಕೋಳಿ ಫಾರಂ ಕಟ್ಟಡ ಕುಸಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಬೀಜದಡಿ ನಿವಾಸಿ ಸಂದೀಪ್ ಪೂಜಾರಿ ಅವರ ಕೋಳಿ ಫಾರಂ ಘಟಕದಲ್ಲಿ ಸುಮಾರು 3,800 ಕೋಳಿಗಳಿತ್ತು. ಮಧ್ಯಾಹ್ನದ ಗಾಳಿಗೆ ಕಟ್ಟಡ ಕುಸಿದಿದ್ದು, ನೂರಾರು ಕೋಳಿಗಳು ಅವಶೇಷದಡಿ ಸಿಲುಕಿ ಸತ್ತಿವೆ.

READ ALSO

ಆರು ವರ್ಷಗಳಿಂದ ಕೋಳಿ ಫಾರಂ ನಡೆಸುತ್ತಿದ್ದೇನೆ. ಕಟ್ಟಡ ಕುಸಿದು ₹ 10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ’ ಎಂದು ಸಂದೀಪ್ ಪೂಜಾರಿ ತಿಳಿಸಿದ್ದಾರೆ.