ಗುರುಪುರ ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ರಾಜ್ಯ ಸರಕಾರದಿಂದ ಪರಿಹಾರ ಧನ ವಿತರಣೆ..

ಮಂಗಳೂರು: ಗುರುಪುರ ಕೈಕಂಬದ ಬೆಂಗ್ರೆ ಗುಡ್ಡೆಯಲ್ಲಿ ಗುಡ್ಡ ಕುಸಿದು ಸಾವನ್ನಪ್ಪಿದ ಇಬ್ಬರು ಮಕ್ಕಳ ಕುಟುಂಬಕ್ಕೆ ಸರಕಾರದಿಂದ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿಯಿತು.

ಗುಡ್ಡ ಕುಸಿತ ಘಟನೆಯಲ್ಲಿ 16 ವರ್ಷದ ಸಫ್ವಾನ್ ಮತ್ತು 10 ವರ್ಷದ ಸಹಲಾ ಮೃತಪಟ್ಟಿದ್ದರು.‌ ತೀವ್ರ ರಕ್ಷಣಾ ಕಾರ್ಯಾಚರಣೆಯ ನಂತರವೂ ಮಕ್ಕಳನ್ನು ಬದುಕಿಸಲು ಸಾಧ್ಯವಾಗಿರಲಿಲ್ಲ.

READ ALSO

ಇಂದು ಪರಿಹಾರ ಧನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಯವರು ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ಈ ಸಂಧರ್ಭದಲ್ಲಿ ಮೂಡಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್ ಹಾಗೂ ಜಿಲ್ಲಾಧಿಕಾರಿ ಶ್ರೀಮತಿ ಸಿಂಧೂ ರೂಪೇಶ್ ಉಪಸ್ಥಿತರಿದ್ದರು.