ಸುಬ್ರಹ್ಮಣ್ಯ: ಬಿರು ಬಿಸಿಲಿನ ನಡುವೆ ಬಿಸಿಲಬೆಗೆಯನ್ನು ತಣಿಸಲು ವರುಣರಾಯ ಮಳೆಹನಿಯ ಸಿಂಚನ ಮಾಡುವ ಮೂಲಕ ಜನರ ಮನತಣಿಸಿದ್ದಾನೆ.
ಇಂದು ಸಂಜೆಯ ವೇಳೆಯಲ್ಲಿ ಸುಬ್ರಹ್ಮಣ್ಯ ಪರಿಸರದಲ್ಲಿ ಸಣ್ಣ ಮಳೆ ಪ್ರಾರಂಭವಾಗಿದ್ದು ಭಕ್ತರಲ್ಲಿ ಹಾಗೂ ಜನ ಸಾಮಾನ್ಯರಲ್ಲಿ ಹರುಷವನ್ನು ತಂದಿದೆ. ಯುಗಾದಿ ಹಬ್ಬದ ಸನಿಹದಲ್ಲಿ ವರುಣರಾಯ ಧರೆಗಿಳಿದು ಬಂದಿದ್ದು ಹೊಸವರ್ಷದ ಹೊಸ್ತಿಲಲ್ಲಿ ಜನರಲ್ಲಿ ನೆಮ್ಮದಿಯನ್ನು ತರಿಸಿದೆ. ಮುಂದಿನ ಎರಡು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.