ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಉಜಿರೆಯ ಸುರಕ್ಷಾ ಮೆಡಿಕಲ್ಸ್ ನ ಮಾಲೀಕರಾದ ಶ್ರೀಧರ ಕೆ.ವಿ.ಯವರು ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿ ಯಾಗಿ ಬೆಳ್ತಂಗಡಿ ಗಣೇಶ್ ಮೆಡಿಕಲ್ಸ್‌ನ ಮಾಲೀಕರಾದ ಮಾಧವ ಗೌಡ ಅವರು ಆಯ್ಕೆಯಾಗಿದ್ದು ಅಶ್ವಿನಿ ಮೆಡಿಕಲ್ಸ್ ಬೆಳ್ತಂಗಡಿಯ ಚಂದ್ರಶೇಖರ್ ಹಾಗೂ ಕಜೆಕಾರ್ ಮೆಡಿಕಲ್ಸ್ ನ ನವೀನ್ ಚಂದ್ರ ಅವರುಗಳು ಗೌರವ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.ಮಹಾವೀರ ಮೆಡಿಕಲ್ಸ್ ನ ಉದಯಕುಮಾರ್ ಉಪಾಧ್ಯಕ್ಷರಾಗಿ, ಅಮರ್ ಡ್ರಗ್ ಹೌಸ್ ಬೆಳ್ತಂಗಡಿ ಯ ಗಣಪತಿ ಭಟ್ ಕೋಶಾಧಿಕಾರಿಯಾಗಿ, ಮಹಾಗಣಪತಿ ಎಂಟರ್ ಪ್ರೈಸಸ್ ನ ಪ್ರಕಾಶ್ ಸಂಚಾಲಕರಾಗಿ ಆಯ್ಕೆಯಾಗಿದ್ದು ಬೆಳ್ತಂಗಡಿ ಸನ್ನಿದಿ ಮೆಡಿಕಲ್ಸ್ ನ ಅಶ್ವಿನಿ, ಉಜಿರೆ ಎಸ್.ಎ.ಮೆಡಿಕಲ್ಸ್ ನ ಪ್ರಕಾಶ್, ಅನ್ನಪೂರ್ಣ ಮೆಡಿಕಲ್ಸ್ ಧರ್ಮಸ್ಥಳದ ರಜತ್, ಬಾಲಾಜಿ ಮೆಡಿಕಲ್ಸ್ ಕಕ್ಕಿಂಜೆಯ ರಾಜೇಶ್, ಮಂಜುಶ್ರೀ ಮೆಡಿಕಲ್ಸ್ ವೇಣೂರಿನ ಜಯಾ ಭಾರಧ್ವಾಜ್, ಗುರುವಾಯನಕೆರೆ ಚಂದ್ರ ಮೆಡಿಕಲ್ಸ್ ನ ವೆಂಕಟ್ರಮಣ ಭಟ್, ಸಮನ್ಯು ಮೆಡಿಕಲ್ಸ್ ಬಳ್ಳಮಂಜ ದ ಪುರಂದರ ಅವರುಗಳು ಜತೆ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುತ್ತಾರೆ‌.

READ ALSO