ಹೈನುಗಾರರಿಗೂ ತಟ್ಟಿದೆ ಕೊರೋನಾ ಸಂಕಷ್ಟ! ನಾಳೆಯಿಂದ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ 1 ರೂ. ಕಡಿತ

ಮಂಗಳೂರು: ಕೋವಿಡ್ 19 ಸಮಸ್ಯೆ ಇದೀಗ ಹೈನುಗಾರರಿಗೂ ತಟ್ಟಿದಂತಿದೆ KMF ಜೂನ್. 21 ರಿಂದ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ 1ರೂ ಕಡಿಮೆಯಾಗಲಿದೆ ಎಂದು ದ.ಕ ಹಾಲು ಉತ್ಪಾದಕರ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ಹಾಲು ಮಹಾಮಂಡಳಿಗೆ ದಿನವಹಿ 86.73 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದು, ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸುಮಾರು ಶೇ.25ರಷ್ಟು ಕುಸಿತವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ 39.54 ಲಕ್ಷ ಲೀಟರ್ ಬಳಕೆಯಾಗಿ, ದಿನವಹಿ 47.19 ಲಕ್ಷ ಲೀಟರ್ ಹಾಲು ಹಾಲಿನ ಪುಡಿಯಾಗಿ ಪರಿವರ್ತನೆಯಾಗುತ್ತಿದೆ.

ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿ, ದಿನವಹಿ 5.0 ಲಕ್ಷ ಕೆಜಿಗೂ ಮೀರಿ ಹಾಲು ಸಂಗ್ರಹಣೆಯಾಗುತ್ತಿದೆ. ಕೋವಿಡ್-19ರ ಸಮಸ್ಯೆಯಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ಮಾರ್ಚ್ ತಿಂಗಳಲ್ಲಿ ಪ್ರತೀ ಕೆಜಿ ಕೆನೆ ರಹಿತ ಹಾಲಿನ ಪುಡಿಗೆ ರೂ.340/- ಮಾರುಕಟ್ಟೆ ದರ ಇದ್ದು, ಪ್ರಸ್ತುತ ದೇಶದಾದ್ಯಂತ ಹಾಲಿನ ಹುಡಿ ದಾಸ್ತಾನು ಹೆಚ್ಚಳದಿಂದ ಪ್ರತಿ ಕೆಜಿಗೆ ರೂ.160/- ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗುವ ನಿರೀಕ್ಷೆಯಿದೆ. ಮಾರುಕಟ್ಟೆಯಲ್ಲಿ ಬೆಣ್ಣೆಯ ದರ ಗಣನೀಯ ಇಳಿಕೆಯಾಗಿದ್ದು, ಸಪ್ಟೆಂಬರ್ ಅಂತ್ಯಕ್ಕೆ ಒಕ್ಕೂಟದಲ್ಲಿ 9.5 ಲಕ್ಷ ಕೆಜಿ ಹೆಚ್ಚುವರಿ ಬೆಣ್ಣೆ ದಾಸ್ತಾನು ಉಳಿಕೆಯಾಗಲಿದೆ.

ಮಾರುಕಟ್ಟೆಯಲ್ಲಿ ಹೋಟೆಲ್, ರೆಸ್ಟೊರೆಂಟ್, ಕ್ಯಾಂಟಿನ್ ಮತ್ತು ವಿದ್ಯಾ-ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ವ್ಯವಹರಿಸದಿರುವುದರಿಂದ ಹಾಗೂ ಶುಭ-ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ಪ್ರವಾಸೋದ್ಯಮ ಸ್ಥಗಿತಗೊಂಡಿರುವುದರಿಂದ ಮಾರುಕಟ್ಟೆ ಏಳು ವರ್ಷಗಳ ಹಿಂದಿನ ಮಾರಾಟಕ್ಕಿಂತಲೂ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ವಾರ್ಷಿಕ ಅಂದಾಜು ರೂ.120 ಕೋಟಿ ವಹಿವಾಟು ಕಡಿಮೆಯಾಗಿ, ಒಕ್ಕೂಟಕ್ಕೆ ಅಂದಾಜು ರೂ.20 ಕೋಟಿ ನಷ್ಟವಾಗುವ ಸಾಧ್ಯತೆಯಿದೆ.

ಜೂನ್ ದಿನವಹಿ 1.22 ಲಕ್ಷ ಕೆಜಿ ಹಾಲನ್ನು ಹಾಲಿನ ಹುಡಿ ಪರಿವರ್ತನೆಗೆ ಕಳುಹಿಸಲಾಗುತ್ತಿದ್ದು, ಪ್ರತಿ ಕೆಜಿ ಹಾಲಿನ ಹುಡಿ ಪರಿವರ್ತನೆಗೆ ರೂ.11.35ರಂತೆ ನಷ್ಟವಾಗಲಿದೆ. 2020 ನೇ ಸಪ್ಟೆಂಬರ್ ಅಂತ್ಯಕ್ಕೆ ಅಂದಾಜು150 ಲಕ್ಷ ಕೆಜಿ ಹಾಲಿನ ಹುಡಿ ಒಕ್ಕೂಟದಲ್ಲಿ ಉತ್ಪಾದನೆಯಾಗಿ ದಾಸ್ತಾನು ಉಳಿಯಲಿದೆ. KMFನ ದಾಸ್ತಾನು ಮಳಿಗೆಗಳಲ್ಲಿ ಪರಿವರ್ತಿತ ಹಾಲಿನ ಪುಡಿ ಮತ್ತು ಬೆಣ್ಣೆ ದಾಸ್ತಾನು ಹೆಚ್ಚಾಗಿದ್ದು, ಶೇಖರಿಸಲು ಸಾಧ್ಯವಾಗದೆ, ಖಾಸಗಿ ದಾಸ್ತಾನು ಮಳಿಗೆಗಳಿಗೆ ದುಬಾರಿ ಬಾಡಿಗೆ ನೀಡಿ ದಾಸ್ತಾನು ಮಾಡಬೇಕಾಗಿದೆ. ಹಾಲಿನ ಹುಡಿ ಮತ್ತು ಬೆಣ್ಣೆ ದಾಸ್ತಾನು ಮಾಡುವುದರಿಂದ ಒಕ್ಕೂಟದ ರೂ.30 ಕೋಟಿ ನಗದು ಹರಿವಿಗೆ ತಡೆಯುಂಟಾಗಿ, ದುಡಿಯುವ ಬಂಡವಾಳದ ಕೊರತೆಯಾಗಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಶಾಲೆಗಳ ಪ್ರಾರಂಭ ವಿಳಂಬವಾಗುತ್ತಿರುವುದರಿಂದ, ಕೆನೆಭರಿತ ಹಾಲಿನ ಪುಡಿ ಮಾರಾಟವೂ ಕೂಡಾ ಸಾಧ್ಯವಾಗದೆ, ಹಾಲಿನ ಹುಡಿ ದಾಸ್ತಾನು ಉಳಿಯುತ್ತಿದೆ.

ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರ ಹಾಲಿಗೆ ನಿರಂತರ ಮಾರುಕಟ್ಟೆ ಕಾಯ್ದುಕೊಂಡು ಬರಲು, ಹಾಲು ಉತ್ಪಾದಕರ ಸಹಕಾರದಿಂದ ಒಕ್ಕೂಟಕ್ಕೆ ಉಂಟಾಗುವ ಆರ್ಥಿಕ ನಷ್ಟವನ್ನು ಅಮೂಲ್ ಸಂಸ್ಥೆ ಅನುಸರಿಸುವ ಮಾರ್ಗದಲ್ಲಿ ಸರಿದೂಗಿಸಿಕೊಳ್ಳುವ ಅನಿವಾರ್ಯತೆಯಿದೆ. ಪ್ರಸ್ತುತ ಕೋವಿಡ್-೧೯ ಸಮಸ್ಯೆಯನ್ನು ನಿರ್ವಹಿಸಲು ಕರ್ನಾಟಕ ರಾಜ್ಯದ ಹಾಲು ಒಕ್ಕೂಟಗಳಲ್ಲಿ ಪ್ರತೀ ಲೀಟರಿಗೆ ಕನಿಷ್ಟ ರೂ.2.20 ರಿಂದ ರೂ.4.70ರವರೆಗೆ ಖರೀದಿ ದರವನ್ನು ಕಡಿಮೆ ಮಾಡಲಾಗಿದೆ. ನಮ್ಮ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಪರಾಮರ್ಶಿಸಿ, ಕರ್ನಾಟಕ ರಾಜ್ಯದಲ್ಲಿ ಒಕ್ಕೂಟವು ಹಾಲು ಉತ್ಪಾದಕರಿಗೆ ಗರಿಷ್ಟ ದರವನ್ನು ಪಾವತಿಸುವ ಹೆಗ್ಗಳಿಕೆಯನ್ನು ಕಾಯ್ದುಕೊಂಡಿದ್ದು, ಪ್ರಸ್ತುತ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಜೂನ್. 21ರಿಂದ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ 1 ರೂ. ಕಡಿಮೆ ಮಾಡಲಾಗಿದೆ. ಮಾನ್ಯ ಹಾಲು ಉತ್ಪಾದಕರು ಎಂದಿನಂತೆ ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿ, ಸಹಕರಿಸಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Spread the love
  • Related Posts

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53ನೇ ವರ್ಷದ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53ನೇ ಸಾಮೂಹಿಕ ವಿವಾಹ ಮೇ 03ರಂದು ಸಂಜೆ 6.48ಕ್ಕೆ ನಡೆಯುವ ಗೋದೊಳಿ ಲಗ್ನದಲ್ಲಿ ನಡೆಯಲಿದೆ. ವರನಿಗೆ ದೋತಿ ಶಾಲು ಮತ್ತು ವಧುವಿಗೆ ಸೀರೆ ರವಿಕೆಕಣ ಹಾಗೂ ಮಂಗಳ ಸೂತ್ರ ಹೂವಿನ ಹಾರ ನೀಡಲಾಗುವುದು ಎರಡನೆ ವಿವಾಹಕ್ಕೆ…

    Spread the love

    ಬೆನಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಅನನ್ಯ – ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

    ಬೆಳ್ತಂಗಡಿ: ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಕುಕ್ಕೆ ಸುಬ್ರಮಣ್ಯ ಮಠದ  ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಸ್ಪತ್ರೆಯ ವಿಸ್ಕೃತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ಆಶೀರ್ವಚನ ನೀಡುತ್ತಾ ಉಜಿರೆಯಂಥ ಸಣ್ಣ ಪ್ರದೇಶದಲ್ಲಿ ಕಳೆದ 25 ವರ್ಷಗಳಿಂದ ಅವಿರತ…

    Spread the love

    You Missed

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53ನೇ ವರ್ಷದ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

    • By admin
    • January 14, 2025
    • 25 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53ನೇ ವರ್ಷದ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

    ಬೆಳ್ತಂಗಡಿ ತಾಲೂಕಿನಾದ್ಯಂತ ಕಾಡಾನೆ ಸಂಚಾರ ಜನರಲ್ಲಿ ಮೂಡಿದ ಆತಂಕ

    • By admin
    • January 14, 2025
    • 63 views
    ಬೆಳ್ತಂಗಡಿ ತಾಲೂಕಿನಾದ್ಯಂತ ಕಾಡಾನೆ ಸಂಚಾರ ಜನರಲ್ಲಿ ಮೂಡಿದ ಆತಂಕ

    ಬೆನಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಅನನ್ಯ – ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

    • By admin
    • January 14, 2025
    • 22 views
    ಬೆನಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಅನನ್ಯ – ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

    ಉಜಿರೆಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

    • By admin
    • January 12, 2025
    • 63 views
    ಉಜಿರೆಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

    ಪೂಜಾ ರವರ ಚಿಕಿತ್ಸೆಗಾಗಿ ಬೇಕಾಗಿದೆ ಸಹೃದಯಿ ದಾನಿಗಳ ಸಹಕಾರ

    • By admin
    • January 12, 2025
    • 86 views
    ಪೂಜಾ ರವರ ಚಿಕಿತ್ಸೆಗಾಗಿ ಬೇಕಾಗಿದೆ ಸಹೃದಯಿ ದಾನಿಗಳ ಸಹಕಾರ

    ಪೆರ್ಲ -ಬೈಪಾಡಿ ಬ್ರಹ್ಮಕಲಶೋತ್ಸವಕ್ಕೆ ಇಂದು ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿಯವರಭೇಟಿ

    • By admin
    • January 11, 2025
    • 46 views
    ಪೆರ್ಲ -ಬೈಪಾಡಿ ಬ್ರಹ್ಮಕಲಶೋತ್ಸವಕ್ಕೆ ಇಂದು ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿಯವರಭೇಟಿ