ಕಡಿರುದ್ಯಾವರ: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಹೇಡ್ಯದಿಂದ ಕುಕ್ಕಾವುವರೆಗೆ ಅಲ್ಲಲ್ಲಿ ರಸ್ತೆ ಹಾಳಾಗಿದ್ದು, ಎರ್ಮಾಲ್ ಪಲ್ಕೆ ಬಳಿ ಮೋರಿ ಕುಸಿದು ವಾಹನ ಸವಾರರಿಗೆ ತುಂಬ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ಕಡಿರುದ್ಯಾವರದ ಕಾನರ್ಪ ಪಣಿಕಲ್ ನವೀನ್ ಅವರು ತನ್ನ ಸ್ವಂತ ಖರ್ಚಿನಿಂದ ಹಿಟಾಚಿ ಮತ್ತು ಟಿಪ್ಪರ್ ಮೂಲಕ ಕೆಟ್ಟುಹೋದ ರಸ್ತೆಗೆ ಮಣ್ಣು ಹಾಕಿ ರಸ್ತೆಯನ್ನು ಸರಿಪಡಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ದಿನನಿತ್ಯ ಶಾಲಾಮಕ್ಕಳು, ರೈತರು, ಅನಾರೋಗ್ಯ ಪೀಡಿತರು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದು ಇದೀಗ ಕೊಂಚ ನೆಮ್ಮದಿಯಿಂದ ಪ್ರಯಾಣಿಸುವಂತ್ತಾಗಿದೆ.






