ಮನೆ ದರೋಡೆ ಮಾಡಲು ಬಂದು ಸಾಕು ನಾಯಿಯನ್ನು ಹತ್ಯೆಗೈದ ಪಾಪಿಗಳು!

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ನಿಡಿಗಲ್ ಓಂಕಾರ ನಿಲಯ ಶುಭ ಚಂದ್ರರಾಜ ರವರ ಮನೆಗೆ ನುಗ್ಗಿದ 4 ಅಪರಿಚಿತ ವ್ಯಕ್ತಿಗಳ ತಂಡ ಸಾಕು ನಾಯಿಯನ್ನು ಹತ್ಯೆ ಮಾಡಿ ಪರಾರಿಯಾದ ಘಟನೆ 13ರ ಮುಂಜಾನೆ ನಡೆದಿದೆ.

ಅಪರಿಚಿತರ ತಂಡವೊಂದು ಮನೆ ಕಂಪೌಡ್ ಒಳಗೆ ಮಾರಕಾಸ್ತ್ರಗಳನ್ನು ಹಿಡಿದು ಅಕ್ರಮ ಪ್ರವೇಶ ಮಾಡಿದ ಸಮಯ ನಾಯಿಯು ಬೊಗಳುತ್ತಿದ್ದನ್ನು ಕಂಡ ಅಪರಿಚಿತರು ಆ ನಾಯಿಯನ್ನು ಅವರಲ್ಲಿದ್ದ ಚೂರಿಯಿಂದ ಇರಿದು ಹತ್ಯೆ ಮಾಡಿದ್ದು ಮನೆಯ ಹಿಂಬದಿಯ ಬಾಗಿಲನ್ನು ಒಡೆದು ಮನೆಯೊಳಗೆ ನುಗ್ಗಲು ಪ್ರ ಯತ್ನಿಸಿದಾಗ ಎಚ್ಚರಗೊಂಡ ಮನೆ ಮಂದಿ ಜೋರಾಗಿ ಬೊಬ್ಬೆ ಹೊಡೆದಾಗ ಅಪರಿಚಿತ 4 ಜನರು ಇದ್ದ ತಂಡ ಕೆಂಪು ಬಣ್ಣದ ಬ್ರೀಝಾ ಕಾರಿನಲ್ಲಿ ಉಜಿರೆ ಕಡೆಗೆ ಪರಾರಿಯಾಗಿದ್ದು, ಅಪರಿಚಿತರ ತಂಡವು ದರೋಡೆ ಮಾಡುವ ಉದ್ದೇಶದಿಂದ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

READ ALSO