ರಾಜ್ಯರಸ್ತೆ ಸಾರಿಗೆ ನೌಕರರಿಗಿಲ್ಲ ವೇತನ! ಸರಕಾರದ ಆಡಳಿತ ವೈಫಲ್ಯವೆಂದ ವಿ. ಪಕ್ಷ ನಾಯಕರು!

ಬೆಂಗಳೂರು: ದೇಶದಾದ್ಯಂತ ಹಬ್ಬದ ವಾತಾವರಣವಿದ್ದರು ksrrc ನೌಕರರಿಗೆ ಮಾತ್ರ ಹಬ್ಬದ ಸಂಭ್ರಮ ಮೂಡಿಲ್ಲ. ಕಳೆದ 6 ತಿಂಗಳುಗಳಿಂದ ಸರಿಯಾಗಿ ಕೆಲಸವಿಲ್ಲದೆ ಇದ್ದು ಇದೀಗ ರಾಜ್ಯದ 1.30 ಲಕ್ಷ ನೌಕರರಿಗೆ ಅಕ್ಟೋಬರ್‌ ತಿಂಗಳ ಸಂಬಳವಾಗದೆ ಹಬ್ಬದ ಸಂತಸವಿಲ್ಲದಂತಾಗಿದೆ. 

ಕೋವಿಡ್‌ ಕಾರಣದಿಂದಾಗಿ ಈ ಬಾರಿ ಕೆಎಸ್ಆರ್‌ಟಿಸಿ ನೌಕರರಿಗೆ ವೇತನ ನೀಡದ ರಾಜ್ಯ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಕಿಡಿಕಾರಿದೆ. ಇದು ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಆಕ್ರೋಶ ವ್ಯಕ್ತಪಡಿಸಿದೆ. 

ಕೋವಿಡ್‌ ಕಾರಣದಿಂದ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳು ಸಂಕಷ್ಟದಲ್ಲಿವೆ. ಈ ಕಾರಣದಿಂದಾಗಿ ಕಳೆದ ಆರು ತಿಂಗಳಿಂದ ನೌಕರರ ವೇತನ ಪಾವತಿಗೆ ಸರ್ಕಾರದ ನೆರವನ್ನು ಪಡೆಯಲಾಗುತ್ತಿದೆ. ಆದರೆ ಈ ಬಾರಿ ಸರ್ಕಾರದಿಂದ ಕೋರಿದ ನೆರವಿಗೆ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ 15 ದಿನ ಕಳೆದರೂ 1.30 ಲಕ್ಷ ನೌಕರರಿಗೆ ಅಕ್ಟೋಬರ್‌ ತಿಂಗಳ ಸಂಬಳವಾಗಿಲ್ಲ. 

ಈ ಕುರಿತಾಗಿ ಟ್ವೀಟ್ ಮಾಡಿದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಎಸ್‌ಆರ್‌ಟಿಸಿಯ 4 ನಿಗಮಗಳ ನೌಕರರಿಗೆ ವೇತನ ಕೊಡದಿರುವುದು ಸಾರಿಗೆ ಇಲಾಖೆ ಮತ್ತು ಸರ್ಕಾರದ ಆಡಳಿತ ವೈಫಲ್ಯದ ಕೈಗನ್ನಡಿ. 

ಸ್ವತಃ ಉಪಮುಖ್ಯಮಂತ್ರಿ ಕೈಯಲ್ಲೇ ಸಾರಿಗೆ ಇಲಾಖೆಯಿದ್ದರೂ ಸುಮಾರು 1.35 ಲಕ್ಷ ನೌಕರರಿಗೆ ಸಂಬಳ ಆಗಿಲ್ಲ ಎಂದು ಕಿಡಿಕಾರಿದ್ದಾರೆ. ಸಂಬಳ ಇಲ್ಲದೆ ದೀಪಾವಳಿಯಂತಹ ಸಡಗರದ ಹಬ್ಬವನ್ನೂ ಸಾರಿಗೆ ನೌಕರರು ಆಚರಿಸದಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಈ ಕೂಡಲೇ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. 

Spread the love
  • Related Posts

    ದ.ಕ ಜಿಲ್ಲಾಧಿಕಾರಿ ಸಹಿತ 17ಜಿಲ್ಲಾಧಿಕಾರಿಯವರ ವರ್ಗಾವಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಡಿ.ಸಿ ಸಹಿತ 17ಜಿಲ್ಲಾಧಿಕಾರಿಯವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಂಗಳೂರಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಮಕ್ಕಳ ಅಚ್ಚುಮೆಚ್ಚಿನ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈಮುಹಿಲನ್ ರವರಿಗೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದು ಸದ್ರಿಯವರ ತೆರವಾದ ಜಾಗಕ್ಕೆ ದರ್ಶನ HV ಯವರನ್ನು ವರ್ಗಾಯಿಸಿ…

    Spread the love

    ಕಾಜೂರು-ದಿಡುಪೆ ರಸ್ತೆಯಲ್ಲಿ ಬಿದ್ದ ಮರ ಕೆಲಕಾಲ ಸಂಚಾರ ಅಸ್ತವ್ಯಸ್ತ

    ಬೆಳ್ತಂಗಡಿ: ಕಾಜೂರಿನಿಂದ ದಿಡುಪೆಗೆ ಹೋಗುವ ರಸ್ತೆಗೆ ಭಾರೀ ಮಳೆಗೆ ಹೆಮ್ಮರವೊಂದು ಉರುಳಿ ಬಿದ್ದು ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.ಬಳಿಕ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಪ್ರತಿದಿನ ಹತ್ತಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಮರ…

    Spread the love

    You Missed

    ದ.ಕ ಜಿಲ್ಲಾಧಿಕಾರಿ ಸಹಿತ 17ಜಿಲ್ಲಾಧಿಕಾರಿಯವರ ವರ್ಗಾವಣೆ

    • By admin
    • June 17, 2025
    • 157 views
    ದ.ಕ ಜಿಲ್ಲಾಧಿಕಾರಿ ಸಹಿತ 17ಜಿಲ್ಲಾಧಿಕಾರಿಯವರ  ವರ್ಗಾವಣೆ

    ಕಾಜೂರು-ದಿಡುಪೆ ರಸ್ತೆಯಲ್ಲಿ ಬಿದ್ದ ಮರ ಕೆಲಕಾಲ ಸಂಚಾರ ಅಸ್ತವ್ಯಸ್ತ

    • By admin
    • June 16, 2025
    • 75 views
    ಕಾಜೂರು-ದಿಡುಪೆ ರಸ್ತೆಯಲ್ಲಿ ಬಿದ್ದ ಮರ ಕೆಲಕಾಲ ಸಂಚಾರ ಅಸ್ತವ್ಯಸ್ತ

    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • June 16, 2025
    • 266 views
    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ  ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    • By admin
    • June 15, 2025
    • 184 views
    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    • By admin
    • June 12, 2025
    • 107 views
    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    • By admin
    • June 12, 2025
    • 65 views
    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ