
ಬೆಳ್ತಂಗಡಿ: ಹಣ ದ್ವಿಗುಣ ಆಗುವ ಆಸೆಯಿಂದ ಹಲವಾರು ರೀತಿಯಲ್ಲಿ ವಂಚನೆ ಮಾಡುವ ಜಾಲಗಳು ಸಕ್ರೀಯವಾಗಿದ್ದು ಈಗಾಗಲೇ ಬೆಳ್ತಂಗಡಿ ತಾಲೂಕಿನಾದ್ಯಂತ ಹಾಗೂ ಅತೀ ಬುದ್ದಿವಂತರೆನಿಸಿಕೊಂಡ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ RPC ಎಂಬ ಅಫ್ ಮೂಲಕ ಕೊಟ್ಯಾಂತರ ರುಪಾಯಿಗಳ ಪಂಗನಾಮ ಹಾಕಿದ ಘಟನೆ ಮಾಸುವ ಬೆನ್ನಲ್ಲೇ ಇದೇ ಮಾದರಿಯಲ್ಲಿ ಆಫ್ ಒಂದು ಸಕ್ರೀಯವಾಗಿದ್ದು V4FILMS.ORG ಹೆಸರಿನಲ್ಲಿ ಹೂಡಿಕೆ ಮಾಡಿದಲ್ಲಿ ಲಕ್ಷಗಟ್ಟಲೆ ಹಣ ಮಾಡಬಹುದು ಎಂಬ ಆಸೆ ಹುಟ್ಟಿಸುವ ವಂಚನಾ ಜಾಲ ಮತ್ತೆ ಕರಾವಳಿಯಲ್ಲಿ ಸಕ್ರೀಯವಾಗಿದೆ.
ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರರು, ದಿನಗೂಲಿ ನೌಕರರು, ಕೃಷಿ ಕೂಲಿ ಕಾರ್ಮಿಕರು, ಬೀಡಿಕಟ್ಟಿ ಜೀವನ ನಡೆಸೋ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸಣ್ಣ ಮೊತ್ತದ ಹೂಡಿಕೆ ಮಾಡಲು ಪ್ರೇರಣೆ ನೀಡುವ ಜೊತೆಗೆ ಇತರರನ್ನು ಕರೆತಂದಲ್ಲಿ ವಿಶೇಷ ಆಫರ್ ಗಳ ಸುರಿಮಳೆ ನೀಡುವ ಇಂತಹಾ ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಮೊದಲು ಸಾವಿರ ಬಾರಿ ಆಲೋಚಿಸಿ ಮುಂದುವರೆಯಿರಿ. ಯಾರೋ ಪರಿಚಯವಿಲ್ಲದ ವ್ಯಕ್ತಿಗಳು ಕಳುಹಿಸುವ ಮೇಸೇಜ್ ಗಳನ್ನು ನಂಬಿ ಹಣ ಸುರಿದರೆ ಕೊನೆಗೆ ಹಣವೂ ಇಲ್ಲ ಮಾರ್ಯಾದೆಯು ಇಲ್ಲದಂತಾಗುತ್ತದೆ ಇಂತಹ scam appಗಳ ಬಳಕೆ ಮಾಡುವ ಬದಲು ಸರಕಾರದ ಸಾಮ್ಯಾದಲ್ಲಿರುವ ಬ್ಯಾಂಕ್,LIC, ಪೋಸ್ಟ್ ಆಫೀಸ್ ಹಾಗೂ ಇತರೇ ಅಧಿಕೃತ ವ್ಯವಹಾರ ಮಾಡುವ ಸಂಸ್ಥೆಗಳೊಂದಿಗೆ ಹೂಡಿಕೆ ಮಾಡುವುದು ಸೂಕ್ತ.
ಇಂತಹ ನಕಲಿ ಜಾಲಗಳು ತಮ್ಮ ಗಮನಕ್ಕೆ ಬಂದಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಸೈಬರ್ ವಂಚಕರಿಂದ ದೂರವಿರಿ