ಧರ್ಮಸ್ಥಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಕಾರ್ಯದ ಅಂಗವಾಗಿ ಮನೆಮನೆ ಸಂಪರ್ಕ ದ ಪ್ರಯುಕ್ತ ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರನ್ನು ಸಂಘದ ಕರ್ನಾಟಕ ದಕ್ಷಿಣ ದ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್, ಪುತ್ತೂರು ಜಿಲ್ಲಾ ಸಂಘಚಾಲಕ್ ವಿನಯಚಂದ್ರ,ಜಿಲ್ಲಾ ಕಾರ್ಯವಾಹ ನವೀನ್ ಕೈಕಾರ ಬೇಟಿಮಾಡಿದರು.
ಸಂಘಟನೆ ಮತ್ತು ಸೇವೆಯ 100ವರ್ಷಗಳ ಸಂಘ ಯಾತ್ರೆಯ ಬಗ್ಗೆ ತಿಳಿಸಿದರು. ಮತ್ತು ಸ್ವಯಂಸೇವಕರು ಸಮಾಜದ ಸಜ್ಜನಶಕ್ತಿಯ ಸಹಕಾರದೊಂದಿಗೆ ಪಂಚ ಪರಿವರ್ತನೆ ಯ ಐದು ವಿಷಯಗಳ ಕುರಿತಾಗಿ ಮನೆ ಮನೆ ಸಂಪರ್ಕದ ಸಂದರ್ಭ ಸಾಹಿತ್ಯಗಳನ್ನು ನೀಡುವ ಮೂಲಕ ಜನಜಾಗೃತಿ ಮಾಡುತ್ತಿದ್ದೇವೆ ಎಂದು ಹೇಳಿದರು.ಪಂಚ ಪರಿವರ್ತನೆ
1)ಸಾಮಾಜಿಕ ಸಾಮರಸ್ಯ,2)ಪರಿಸರ ಸಂರಕ್ಷಣೆ ,3) ಕುಟುಂಬ ಪ್ರಬೋಧನ, 4)’ ಸ್ವ’ ಆಧಾರಿತ ಜೀವನ, 5)ನಾಗರಿಕ ಕರ್ತವ್ಯಪ್ರಜ್ಞೆ ಯ ಬಗ್ಗೆ ವಿವರಿಸಿದರು.
ಈ ಸಂದರ್ಭ ಘುಮಂತು ಕಾರ್ಯ ವಿಭಾಗ ಸಹ ಸಂಯೋಜಕ ಸುದರ್ಶನ್ ಕನ್ಯಾಡಿ,ಉಜಿರೆ ತಾಲೂಕು ಸಂಪರ್ಕ ಪ್ರಮುಖ್ ಶಿವಪ್ರಸಾದ್ ಸುರ್ಯ ಉಪಸ್ಥಿತರಿದ್ದರು. ಪೂಜ್ಯ ಸ್ವಾಮೀಜಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯವಾಹ ಡಾ ಜಯಪ್ರಕಾಶ್ ಅವರಿಗೆ ಶಾಲು ಹೊದಿಸಿ ಪ್ರಸಾದ ನೀಡಿ ಆಶೀರ್ವದಿಸಿದರು.





