ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮರಳುಗಾರಿಕೆ ಸಮಸ್ಯೆ ಸಂಬಂಧ ‘ಪ್ರತ್ಯೇಕ ಮರಳು ನೀತಿ’ ಶೀಘ್ರ ಅನುಷ್ಠಾನ ಹಾಗೂ ಸಾಂಪ್ರದಾಯಿಕ ಮರಳು ಗಣಿಗಾರಿಕೆ ಕುರಿತು ಮಾನ್ಯ ಸಚಿವರಾದ ಶ್ರೀ ಸಿ.ಸಿ.ಪಾಟೀಲ್ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರುಗಳಾದ ಶ್ರೀ ಸಂಜೀವ ಮಠಂದೂರು, ಶ್ರೀ ಎಸ್.ಅಂಗಾರ, ಶ್ರೀ ರಾಜೇಶ್ ನಾಯ್ಕ್, ಶ್ರೀ ವೇದವ್ಯಾಸ ಕಾಮತ್, ಶ್ರೀ ಹರೀಶ್ ಪೂಂಜಾ ಅವರು ಉಪಸ್ಥಿತರಿದ್ದರು.