ಬೆಳ್ತಂಗಡಿ : ಕಡಿರುದ್ಯಾವರ ಗ್ರಾಮದ ಅಲೆಂಜಿಕಟ್ಟ ಎಂಬಲ್ಲಿ ನೇತ್ರಾವತಿ ನದಿ ಕಿನಾರೆಯಿಂದ ಮರಳು ಕಳ್ಳತನ ಮಾಡಿ ಸಾಗಾಟ ಮಾಡಲು ಲಾರಿಗೆ ತುಂಬಿಸುತ್ತಿರುವ ಬಗ್ಗೆ ಮಾ.4 ರಂದು ಸಂಜೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಚರ್ಚ್ ಗುಡ್ಡೆ ನಿವಾಸಿ ನಿಜಾಮುದ್ದೀನ್(47) ಮತ್ತು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಿಲ್ಲೂರು ನಿವಾಸಿ ಹನೀಫ್(44) ಎಂಬವರು KA-53-A-9796 ನಂಬರಿನ ಟಿಪ್ಪರ್ ಲಾರಿಯಲ್ಲಿ ಯಾವುದೇ ಸರಕಾರದ ಅನುಮತಿ ಇಲ್ಲದೆ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದರು.
ಅಕ್ರಮ ಮರಳು ತೆಗೆಯುತ್ತಿದ್ದ ಸ್ಥಳದಿಂದ 3 ಲಕ್ಷದ 50 ರೂಪಾಯಿ ಮೌಲ್ಯದ ಒಂದು ಲಾರಿ, 6,500 ರೂಪಾಯಿ ಮೌಲ್ಯದ ಮರಳು,ಮರಳನ್ನು ಲಾರಿಗೆ ತುಂಬಿಸಲು ಉಪಯೋಗಿಸಿದ 150 ರೂಪಾಯಿ ಮೌಲ್ಯದ ಪ್ರೈಬರ್ ಬುಟ್ಟಿಗಳು 3,100 ರೂಪಾಯಿ ಮೌಲ್ಯದ ಹಾರೆ 150 ರೂಪಾಯಿ ಮೌಲ್ಯದ ಕಬ್ಬಿಣದ ಬಕೆಟ್ 12,500 ರೂಪಾಯಿ ಮೌಲ್ಯದ ಕಬ್ಬಿಣದ ಮೆಟ್ಟಿಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಇಬ್ಬರು ಆರೋಪಿಗಳಾದ ನಿಜಾಮುದ್ದೀನ್ ಮತ್ತು ಹನೀಫ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಕುಶಾಲಪ್ಪ ನಾಯ್ಕ್ ಅವರು ಮಾ.4 ರಂದು ನೀಡಿದ ದೂರಿನ ಮೇರೆಗೆ BNS -2023 (u/s-303(2),r/w3(5)),MMDR Act 1957(u/s-4(1),4(1A),21(1)(1A),KMMCR-1994(u/s-42,43,44) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.





